ಕರ್ನಾಟಕ

karnataka

ETV Bharat / state

ಶಾಲಾ ವಾಹನ ಕಂಬಕ್ಕೆ ಡಿಕ್ಕಿ: ಮಕ್ಕಳಿಗೆ ಸಣ್ಣ ಪುಟ್ಟ ಗಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಬಳಿ ಶಾಲಾ ಬಸ್​​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಸ್​​ನಲ್ಲಿದ್ದ ನಾಲ್ಕು ಮಕ್ಕಳಿಗೆ ಸಣ್ಣ - ಪುಟ್ಟ ಗಾಯಗಳಾಗಿವೆ.

ಶಾಲಾ ವಾಹನ ಕಂಬಕ್ಕೆ ಡಿಕ್ಕಿ

By

Published : Aug 26, 2019, 5:02 PM IST

Updated : Aug 26, 2019, 5:08 PM IST

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಕಂಬಕ್ಕೆ ಡಿಕ್ಕಿ‌ ಹೊಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಬಳಿ ನಡೆದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರದ ಲಿಟಿಲ್ ಮಿಲೇನಿಯಮ್ ಶಾಲೆಯ ಬಸ್, ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದಾಗ ಹಾರೋಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ​​​ ಕಂಬಕ್ಕೆ ಡಿಕ್ಕಿ ಹೊಡೆದಿದೆ.‌

ವಾಹನದಲ್ಲಿ ಚಾಲಕ ಸೇರಿದಂತೆ ನಾಲ್ವರು ಮಕ್ಕಳಿದ್ದರು. ಆದ್ರೆ ‌ಅದೃಷ್ಣವಶಾತ್ ಸಣ್ಣಪುಟ್ಟ ಗಾಯಗಳಿಂದ ನಾಲ್ಕೂ ಮಕ್ಕಳು ಪಾರಾಗಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

Last Updated : Aug 26, 2019, 5:08 PM IST

ABOUT THE AUTHOR

...view details