ಕರ್ನಾಟಕ

karnataka

ETV Bharat / state

ನೂರು ಅಡಿ ಆಳದ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್: ಚಾಲಕನಿಗೆ ಗಂಭೀರ ಗಾಯ - ಬೆಂಗಳೂರಿನಲ್ಲಿ ಹಳ್ಳಕ್ಕೆ ಬಿದ್ದ ಬಸ್​

ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್​ವೊಂದು ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಬಿದ್ದಿದೆ.

ನೂರು ಅಡಿ ಆಳದ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್
ನೂರು ಅಡಿ ಆಳದ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್

By

Published : Jun 2, 2022, 6:34 PM IST

ಬೊಮ್ಮನಹಳ್ಳಿ: ಶಾಲಾ ಬಸ್​ವೊಂದು ರಸ್ತೆ ಬದಿಯ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನಡೆದಿದೆ.

ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್ ಇದಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ಹೋಗಿತ್ತು. ಈ ವೇಳೆ ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಶಾಲಾ ಬಸ್ ಬಿದ್ದಿದೆ.

ಕೂಡ್ಲು ಬಳಿಯ ರಸ್ತೆಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳವನ್ನು ಮುಚ್ಚಿಸಲು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅಪಘಾತ ಆಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ

ABOUT THE AUTHOR

...view details