ಕರ್ನಾಟಕ

karnataka

ETV Bharat / state

ಜಮೀರ್ ಅಹಮ್ಮದ್​ ಪಾಕಿಸ್ತಾನಕ್ಕೆ ಹೋಗಲಿ: ಶಾಸಕ ಸತೀಶ್ ರೆಡ್ಡಿ - ಜಮೀರ್ ಅಹಮ್ಮದ್​

ಆರೋಪ ಮಾಡಿದಾಗಲೂ ಬಾಬು ಎಂಬುವರು ಯಾರು ಎಂದು ನಮಗೆ ತಿಳಿದಿರಲಿಲ್ಲ. ನನ್ನ ಸಂಪರ್ಕದಲ್ಲಿಯೇ ಇರದ ಬಾಬು ಹೆಸರಿನ ಜೊತೆಗೆ ನನ್ನ ಹೆಸರನ್ನು ಪ್ರಸ್ತಾಪಿಸಿರುವುದು ಒಂದು ಷಡ್ಯಂತ್ರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು..

Satish Reddy outrage against Zamir Ahmed
ಜಮೀರ್ ಅಹಮ್ಮದ್​ ವಿರುದ್ಧ ಸತೀಶ್​ ರೆಡ್ಡಿ ಆಕ್ರೋಶ

By

Published : Jun 21, 2021, 4:54 PM IST

ಬೆಂಗಳೂರು/ಆನೇಕಲ್: ಜಮೀರ್ ಅಹಮದ್​ಗೆ ಪಾಕಿಸ್ತಾನದ ಒಲವು ಆಗಿಂದಾಗ್ಗೆ ಉಕ್ಕಿ ಬರುತ್ತೆ. ಈ ದೇಶದ ಅನ್ನ ತಿಂದು ಇಲ್ಲಿ ಜೀವಿಸಿ ಪಾಕಿಸ್ತಾನವನ್ನೇ ಹೊಗಳುವುದು ಅವರಿಗೆ ವಾಡಿಕೆಯಾಗಿದೆ. ಅಷ್ಟು ಒಲವಿದ್ದರೆ ಆತ ಅಲ್ಲಿಗೇ ಹೋಗಲಿ ಎಂದು ಬೊಮ್ಮನಹಳ್ಳಿ ಶಾಸಕ ಶಾಸಕ ಸತೀಶ್ ರೆಡ್ಡಿ ಕಿಡಿ ಹೇಳಿದ್ದಾರೆ.

ಬೊಮ್ಮನಹಳ್ಳಿ ಭಾಗದ ಗಾರ್ಮೆಂಟ್ಸ್ ಕಾರ್ಮಿಕರಿಗೆ 20 ಸಾವಿರ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತು ಮುಂದುವರೆಸಿ ಕಳೆದ ಪಾದರಾಯನಪುರ ಗಲಭೆಕೋರರಿಗೆ ಹೂ ಚೆಲ್ಲಿ ಸ್ವಾಗತಿಸಿದ್ದಾರೆ. ಜಮೀರ್ ಹೇಳಿಕೆಗಳು ದೇಶದ್ರೋಹದ್ದಾಗಿವೆ. ಬೆಡ್ ಬ್ಲಾಕಿಂಗ್ ದಂಧೆ ಹಗರಣದಲ್ಲಿ ಸಿಲುಕಿಕೊಂಡವರು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಇರುವುದು ಬಯಲಿಗೆ ಬರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಮೀರ್ ಅಹಮ್ಮದ್​ ವಿರುದ್ಧ ಸತೀಶ್​ ರೆಡ್ಡಿ ಆಕ್ರೋಶ
ಬೆಡ್ ಬ್ಲಾಕಿಂಗ್ ದಂಧೆಯನ್ನ ಸಂಸದ ತೇಜಸ್ವಿ ಸೂರ್ಯ ಜೊತೆ ಸೇರಿ ಬಯಲಿಗೆ ಎಳೆದಿದ್ದು ನಿಜ. ಅದಾದ ಎರಡೇ ದಿನದಲ್ಲಿ ಅಧಿಕಾರದಲ್ಲಿರುವ ನಮ್ಮದೇ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂಬ ಅನುಮಾನ ಮೂಡಿ ಮುಜುಗರಕ್ಕೊಳಗಾದೆ. ನಮ್ಮ ವಿರುದ್ದ ಆರೋಪಿಸಿ ಕೆಲ ಪತ್ರಿಕೆಯಲ್ಲಿ ಬರೆಸಿ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪ ಮಾಡಿದಾಗಲೂ ಬಾಬು ಎಂಬುವರು ಯಾರು ಎಂದು ನಮಗೆ ತಿಳಿದಿರಲಿಲ್ಲ. ನನ್ನ ಸಂಪರ್ಕದಲ್ಲಿಯೇ ಇರದ ಬಾಬು ಹೆಸರಿನ ಜೊತೆಗೆ ನನ್ನ ಹೆಸರನ್ನು ಪ್ರಸ್ತಾಪಿಸಿರುವುದು ಒಂದು ಷಡ್ಯಂತ್ರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಓದಿ: ನಮ್ಮಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣಗಳಿಲ್ಲ.. ಇರೋದೊಂದೇ ಅದು ಕಾಂಗ್ರೆಸ್ : ಸಿದ್ದರಾಮಯ್ಯ

ABOUT THE AUTHOR

...view details