ಕರ್ನಾಟಕ

karnataka

ETV Bharat / state

ಸತೀಶ್ ಹೇಳಿಕೆ ದುರದೃಷ್ಟಕರ.. ಪ್ರತಿಭಟಿಸುವ ನೈತಿಕತೆ ಬಿಜೆಪಿಗಿಲ್ಲ ಎಂದ ಸಂಸದ ಡಿ ಕೆ ಸುರೇಶ್

ಸತೀಶ್ ಜಾರಕಿಹೊಳಿ ಹಿಂದು ಪದ ಅಶ್ಲೀಲ ಬಳಕೆ ವಿಚಾರವಾಗಿ ಬಿಜೆಪಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ. ಭ್ರಷ್ಟ ಬಿಜೆಪಿ ಪಕ್ಷವು ಸುಮ್ಮನೆ ಈ ವಿಷಯ ದೊಡ್ಡದು ಮಾಡುತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

MP DK Suresh
ಡಿ ಕೆ ಸುರೇಶ ಸಂಸದ

By

Published : Nov 9, 2022, 4:52 PM IST

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಪದ ಬಗ್ಗೆ ಹೇಳಿಕೆ ದುರದೃಷ್ಟಕರ ಎಂದು ಸಂಸದ ಡಿ ಕೆ ಸುರೇಶ್ ವಿಷಾದ ವ್ಯಕ್ತಪಡಿಸಿದ್ದಾರೆ. ಸದಾಶಿವನಗರ ತಮ್ಮ‌ ನಿವಾಸದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ವಿವಾದಿತ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅದನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಖಂಡಿಸಿದ್ದಾರೆ.

ಬಿಜೆಪಿಗೆ ನೈತಿಕತೆ ಇಲ್ಲ:ಸತೀಶ್ ಹಿಂದು ಪದ ಬಳಕೆ ವಿಚಾರವಾಗಿ ಬಿಜೆಪಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ. ಭ್ರಷ್ಟ ವ್ಯವಸ್ಥೆ ಇಟ್ಟುಕೊಂಡು ಬಿಜೆಪಿ ರಾಮಾಯಣ ಮಹಾಭಾರತ ಹೆಸರಲ್ಲಿ ಧರ್ಮ, ದೇಶ ಒಡೆಯುತ್ತಿದೆ. ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸುಮ್ಮನೇ ಈ ವಿಷಯ ದೊಡ್ಡದು ಮಾಡುತ್ತಿದ್ದಾರೆ ಎಂದು ಅಪಾದಿಸಿದರು.

ಭ್ರಷ್ಟ ವ್ಯವಸ್ಥೆ ತಡೆ ಯಾಕಿಲ್ಲ:. ಆರ್ ಎಸ್ಎಸ್ ನವರು 40% ಕಮಿಷನ್ ಬಗ್ಗೆ ಯಾಕೆ ಹೋರಾಟ ಮಾಡ್ತಿಲ್ಲ. ಭ್ರಷ್ಟ ವ್ಯವಸ್ಥೆಯನ್ನು ಆರ್ ಎಸ್ ಎಸ್ ಒಪ್ಪಿಕೊಂಡಂತಿದೆ. ಸಂವಿಧಾನ ತಿರುಚುವ ಕೆಲಸವನ್ನು ಬಿಜೆಪಿಯವರು ಮಾಡ್ತಿರೋದು. ಭ್ರಷ್ಟ ವ್ಯವಸ್ಥೆ ತಡೆಗೆ ಆರ್ ಎಸ್ ಎಸ್ ದವರು ಯಾಕೆ ಒತ್ತಾಯಿಸುತ್ತಿಲ್ಲ. ಆರ್ ಎಸ್ ಎಸ್ ಸುಮ್ಮನೆ ಇರೋದು ಯಾಕೆ? ಇದರಲ್ಲಿ ಪಾಲಿದೆಯಾ? ಎಂದು ಪ್ರಶ್ನಿಸಿದರು.

ವಲಸಿಗರೆಗೆ ಭವಿಷ್ಯ ಕೊಟ್ಟಿದ್ದೇ ಕಾಂಗ್ರೆಸ್:ಡಿ.ಕೆ.ಶಿವಕುಮಾರ್ ಗೆ ಮುನಿರತ್ನರಿಂದ ಬಿಜೆಪಿ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ಮಂತ್ರಿ ಆಗಬೇಕು ಅಂತ ಹೋದವರೆಲ್ಲ ನಮ್ಮನ್ನು ಕರೆದರೆ ಅರ್ಥವಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಹೋದವರಿಗೆ ರಾಜಕೀಯ ಭವಿಷ್ಯ ಕೊಟ್ಟಿದ್ದು ಅದು ಕಾಂಗ್ರೆಸ್ ಪಕ್ಷ. ಒಬ್ಬ ವ್ಯಕ್ತಿ, ಸಾಮಾನ್ಯನಾಗಿ ಬಿಜೆಪಿಗೆ ಹೋಗಿದ್ರೆ ಕಾರ್ಪೊರೇಷನ್ ಟಿಕೇಟ್​ ಸಹ ಬಿಜೆಪಿ ಕೊಡ್ತಿರಲಿಲ್ಲ. ಕಾಂಗ್ರೆಸ್ ನಾಯಕರನ್ನಾಗಿ ಮಾಡಿ ಬಳುವಳಿಯಾಗಿ ಕೊಟ್ಟಿದ್ದೇವೆ. ತಾವು ಅಧಿಕಾರದಲ್ಲಿದ್ದೀರಿ. ತಮ್ಮ ಸರ್ಕಾರ ಇದೆ ಅಂತ ಬಾಯಿಗೆ ಬಂದಂತೆ ಪ್ರಚಾರಕ್ಕಾಗಿ ಮಾತಾಡಿದರೆ ನಾವೇನೂ ಮಾಡೋದಕ್ಕಾಗಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ

ABOUT THE AUTHOR

...view details