ದೊಡ್ಡಬಳ್ಳಾಪುರ:ನೆರೆ ಪರಿಹಾರ ಕೊಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ದೊಡ್ಡಬಳ್ಳಾಪುರ ನೆರೆ ಪರಿಹಾರ ಸಮಿತಿ ರಾಜ್ಯದ 28 ಸಂಸದರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಅರಿಶಿನ, ಕುಂಕುಮ, ಬಳೆ ಮತ್ತು ಸೀರೆ ಪಾರ್ಸಲ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನೆರೆ ಪರಿಹಾರ ನೀಡದ ಕೇಂದ್ರ: 28 ಸಂಸದರ ಜೊತೆ ವಿತ್ತ ಸಚಿವೆಗೂ ಬಳೆ, ಸೀರೆ ಪಾರ್ಸಲ್! - ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್
ನೆರೆ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ದೊಡ್ಡಬಳ್ಳಾಪುರ ನೆರೆ ಪರಿಹಾರ ಸಮಿತಿ, ರಾಜ್ಯದ 28 ಸಂಸದರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅರಿಶಿನ ಕುಂಕುಮ ಬಳೆ ಮತ್ತು ಸೀರೆ ಪಾರ್ಸಲ್ ಮಾಡುವ ಮೂಲಕ ಪ್ರತಿಭಟಿಸಿದ್ರು.
ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರವಾಹ ಬಂದು ಸಾವಿರಾರು ಜನ ನೆಲೆ ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ದೊಡ್ಡಬಳ್ಳಾಪುರ ನೆರೆ ಸಂತ್ರಸ್ತರ ಪರಿಹಾರ ಸಮಿತಿ ದೊಡ್ಡಬಳ್ಳಾಪುರ ನಾಗರಿಕರ ಸಹಾಯದಿಂದ 4 ಲಾರಿಗಳಷ್ಟು ದವಸ, ಬಟ್ಟೆ, ದಿನ ಬಳಕೆಯ ವಸ್ತುಗಳನ್ನು ವಿತರಿಸಿತ್ತು. ಅದರೆ ಸಂತ್ರಸ್ತರ ಸಹಾಯಕ್ಕೆ ಬರಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿಯವರೆಗೂ ಯಾವುದೇ ಸಹಾಯ ಮಾಡಿಲ್ಲ. ಕೇಂದ್ರದ ಮಲತಾಯಿ ಧೋರಣೆ ತೋರಿಸುತ್ತಿದ್ದು ರಾಜ್ಯ ಸರ್ಕಾರ ಕಲುಷಿತ ರಾಜಕಾರಣದಲ್ಲಿ ಮುಳುಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದೇ ವೇಳೆ ಉಪವಿಭಾಗದಿಕಾರಿಗಳ ಮೂಲಕ ರಾಜ್ಯದ 28 ಸಂಸದರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ಗೆ ಅರಿಶಿನ ಕುಂಕುಮ ಬಳೆ ಮತ್ತು ಸೀರೆ ಪಾರ್ಸಲ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.