ಕರ್ನಾಟಕ

karnataka

ETV Bharat / state

ನನ್‌ ಜೀವ ಬೇಕಾದ್ರೂ ಕೊಡ್ತೀನಿ ನನ್‌ ಮಕ್ಕಳಂತೆ ಸಾಕಿರುವ ಮರ ಕಡಿಯಲು ಬಿಡಲ್ಲ.. -ಪದ್ಮಶ್ರೀ ತಿಮ್ಮಕ್ಕ - undefined

ರಾಜ್ಯ ಹೆದ್ದಾರಿ 94 ಬಾಗೇಪಲ್ಲಿ, ಹಲಗೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳ ರಸ್ತೆಯ ಮೂಲಕವೇ ರಾಜ್ಯ ಹೆದ್ದಾರಿ 94 ಹಾದು ಹೋಗಲಿದೆ. ಒಂದು ವೇಳೆ ರಸ್ತೆ ಅಗಲೀಕರಣವಾದರೆ 287 ಮರಗಳಿಗೆ ಕೊಡಲಿ ಬೀಳಲಿದ್ದು, ಇದರ ಜೊತೆಗೆ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಇಲ್ಲಿನ ಒಂದೆಂದೂ ಮರವನ್ನ ತಿಮ್ಮಕ್ಕ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

Bangalore

By

Published : Jun 3, 2019, 11:54 PM IST

ನೆಲಮಂಗಲ:ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ಗ್ರಾಮದಲ್ಲಿ ತಾವು ಮಕ್ಕಳಂತೆ ಬೆಳೆಸಿದ ಸಾಲುಮರಗಳು ಬಲಿಯಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸಾಲು ಮರದ ತಿಮ್ಮಕ್ಕ ಸಿಎಂ ಹೆಚ್‌ಡಿಕೆ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ.

ಹೆದ್ದಾರಿ ಅಗಲೀಕರಣಕ್ಕೆ ಸಾಲುಮರದ ತಿಮ್ಮಕ್ಕ ಬೆಳೆಸಿದ ಮರಗಳು ಬಲಿವಾಗುತ್ತಾ?

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ ತಿಮ್ಮಕ್ಕ ಕುದೂರು ಗ್ರಾಮದಿಂದ ಹುಲಿಕಲ್ ಗ್ರಾಮದವರೆಗೂ ರಸ್ತೆಯ ಎರಡು ಬದಿಯಲ್ಲಿ 4 ಕಿ.ಮೀ ವರೆಗೂ 287 ಮರ ಬೆಳೆಸಿದ್ದಾರೆ. ಈ ಮರಗಳು ಈಗ ಬೃಹತ್ತಾಗಿ ಬೆಳೆದು ರಸ್ತೆಗೆ ಚಪ್ಪರದಂತೆ ಬೆಳೆದಿವೆ. ದಾರಿಹೋಕರಿಗೆ ನೆರಳು. ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೆರಳು ನೀಡುತ್ತಿವೆ. ಆದರೆ, ಇದೇ ಮರಗಳಿಗೆ ಇವತ್ತು ಕೊಡಲಿ ಬೀಳುವ ಅಪಾಯ ಎದುರಾಗಿದೆ.

ರಾಜ್ಯ ಹೆದ್ದಾರಿ 94 ಬಾಗೇಪಲ್ಲಿ, ಹಲಗೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳ ರಸ್ತೆಯ ಮೂಲಕವೇರಾಜ್ಯ ಹೆದ್ದಾರಿ 94 ಹಾದು ಹೋಗಲಿದೆ. ಒಂದು ವೇಳೆ ರಸ್ತೆ ಅಗಲೀಕರಣವಾದರೆ 287 ಮರಗಳಿಗೆ ಕೊಡಲಿ ಬೀಳಲಿದ್ದು, ಇದರ ಜೊತೆಗೆ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಇಲ್ಲಿನ ಒಂದೆಂದೂ ಮರವನ್ನ ತಿಮ್ಮಕ್ಕ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಯಾವುದೇ ಕಾರಣಕ್ಕೂ ಸಾಲು ಮರಗಳ ಒಂದೇ ಒಂದು ರೆಂಬೆಯನ್ನೂ ಕಡಿಯಲು ಬಿಡುವುದಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲದೆ ಹೋದರೆ ನಾನು ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮರ ಉಳಿಸಿಕೊಳ್ಳಲು ಡಿಸಿಎಂ, ಸಿಎಂ ಮೊರೆ :
ತಿಮ್ಮಕ್ಕ ಮಕ್ಕಳಂತೆ ಬೆಳೆಸಿದ ಮರಗಳನ್ನು ಉಳಿಸಿಕೊಳ್ಳಲು ಉಪಮುಖ್ಯಮಂತ್ರಿ ಪರಮೇಶ್ವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು. ಹಾಗೆಯೇ ಸಿಎಂ ಹೆಚ್​ಡಿಕೆ ಅವರಿಗೂ ಸಾಲು ಮರದ ತಿಮ್ಮಕ್ಕ ಮನವಿ ಮಾಡಿದ್ದು, ಇಬ್ಬರೂ ನಾಯಕರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details