ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಶಬ್ದ ಮಾಡುವ ದುಬಾರಿ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ವೀಕೆಂಡ್ ಜಾಲಿರೈಡ್ ಹೊರಟಿದ್ದವರಿಗೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳು ದಂಡ ಪ್ರಯೋಗ ಮಾಡುವ ಮೂಲಕ ಆಘಾತ ನೀಡಿದ್ದಾರೆ.
ಇಂಜಿನ್ ಬೂಸ್ಟರ್ ಆಲ್ಟರ್ ಮಾಡಿಸಿದ್ದ ವಾಹನ ಸವಾರರಿಗೆ ಆರ್‌ಟಿಒ ಬಿಸಿ
ಆರ್‌ಟಿಒ ಅಧಿಕಾರಿ ಸುಧಾಕರ್ ಮತ್ತವರ ತಂಡ ಇಂಜಿನ್ ಬೂಸ್ಟ್ ಆಲ್ಟರ್ ಮಾಡಿಸಿದ್ದ ದುಬಾರಿ ಕಾರುಗಳು ಮತ್ತು ಬೈಕ್‌ಗಳನ್ನು ಜಪ್ತಿ ಮಾಡಿ ದಂಡ ಹಾಕಿದ್ದಾರೆ.
ನೆಲಮಂಗಲ ನಗರದ ಕುಣಿಗಲ್ ರಸ್ತೆ ರಾ.ಹೆದ್ದಾರಿ 75ರ ಲ್ಯಾಂಕೋ ಟೋಲ್ ಬಳಿ ಆರ್‌ಟಿಒ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಅಪರ ಸಾರಿಗೆ ಆಯುಕ್ತ ನರೇಂದ್ರ ಹೊಳ್ಕರ್ ಹಾಗೂ ಜಂಟಿ ಸಾರಿಗೆ ಆಯುಕ್ತರ ಆದೇಶದ ಮೇರೆಗೆ ಆರ್‌ಟಿಒ ಅಧಿಕಾರಿ ಸುಧಾಕರ್ ಮತ್ತವರ ತಂಡ ಇಂಜಿನ್ ಬೂಸ್ಟ್ ಆಲ್ಟರ್ ಮಾಡಿಸಿದ್ದ ದುಬಾರಿ ಕಾರುಗಳು ಮತ್ತು ಬೈಕ್‌ಗಳನ್ನು ಸೀಜ್ ಮಾಡಿ, ದಂಡ ಹಾಕಿದರು.
ಇದೇ ಸಂದರ್ಭದಲ್ಲಿ ದೋಷಪೂರಿತ ಇಂಜಿನ್ ಹೊಂದಿರುವ ಬೈಕ್ ಹಾಗೂ ಕಾರಿನ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಇದೇ ವೇಳೆ ಸೋಮವಾರದಂದು ಸೈಲೆನ್ಸರ್ ಬದಲಾಯಿಸಿ, ಅವುಗಳನ್ನು ತಂದು ತೋರಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಬದಲಾಯಿಸಿ ತರದಿದ್ದಲ್ಲಿ ಅಂತಹವರ ನೋಂದಣಿ ಪತ್ರ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.