ಕರ್ನಾಟಕ

karnataka

ETV Bharat / state

ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್.ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...! - SP Vamshikrishna Warning to Bangalore Rural Rowdies

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ರೌಡಿಶೀಟರ್​ಗಳ ಪರೇಡ್​ ಅನ್ನು ಬ್ಯಾಡರಹಳ್ಳಿಯ ಡಿಎಆರ್ ಮೈದಾನದಲ್ಲಿ ನಡೆಸಲಾಯಿತು. ಪರೇಡ್ ನಲ್ಲಿ ಭಾಗಿಯಾಗಿದ್ದ ಬಹುತೇಕ ರೌಡಿಗಳಿಗೆ ಎಸ್​ಪಿ ವಂಶಿಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

rowdy-sheeter-parade-was-held-in-bangalore-rural-district
ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್.ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...!

By

Published : Jul 13, 2022, 6:04 PM IST

Updated : Jul 13, 2022, 7:14 PM IST

ಬೆಂಗಳೂರು: ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೌಡಿಶೀಟರ್​​​​ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ‌. ಸರ್ಚ್ ವಾರಂಟ್​ ಪಡೆದು ಬೆಂಗಳೂರು ಗ್ರಾಮಾಂತರದ ಸುಮಾರು 190ಕ್ಕೂ ಅಧಿಕ ರೌಡಿಶೀಟರ್​​​​ಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿನ ಕುಖ್ಯಾತ ರೌಡಿಗಳಾದ ಬೆತ್ತನಗೆರೆ ಶಂಕರ ಹಾಗೂ ಮಂಜ, ಹೇಮಂತ್, ಬಂಡೆ ಮಂಜ, ಪಟಾಸ್ ರವಿ, ನೇಪಾಳಿ ಮಂಜ ಸೇರಿದಂತೆ ಬಹುತೇಕ ರೌಡಿಗಳನ್ನು ವಶಕ್ಕೆ ಪಡೆದು ಬ್ಯಾಡರಹಳ್ಳಿಯ ಡಿಎಆರ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು.

ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್.ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...!

ಪರೇಡ್ ವೇಳೆ 'ಸರಗೂರು ಬಳಿ ಜಮೀನು ಖರೀದಿಸಿದ್ದೇನೆ, ಸಮಾಜ ಸೇವೆಯಲ್ಲಿ ತೊಡಗಿದ್ದೇನೆ' ಎಂದು ಬೆತ್ತನಗೆರೆ ಶಂಕರ ಹೇಳುತ್ತಿದ್ದಂತೆ ಗರಂ ಆದ ಎಸ್.ಪಿ ವಂಶಿಕೃಷ್ಣ 'ಮೊದಲು ಮೇಲಿರುವ ಕೇಸುಗಳನ್ನು ಬಗೆಹರಿಸಿಕೋ, ಇಲ್ಲ ಎಲ್ಲಿ ಹೋದರೂ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.

ಸದ್ಯ ಬೆರಳೆಣಿಕೆಯಷ್ಟು ರೌಡಿಗಳನ್ನ ಹೊರತುಪಡಿಸಿ ಬಹುತೇಕ ಎಲ್ಲ ರೌಡಿಶೀಟರ್​​ಗಳನ್ನು ಕರೆತಂದು ಎಚ್ಚರಿಕೆ ನೀಡಲಾಗಿದ್ದು, ಪ್ರಸ್ತುತ ಅವರ ವಿಳಾಸ, ಉದ್ಯೋಗ, ಸಹಚರರ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನ ಕಲೆಹಾಕಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.

ಓದಿ :ಉಡುಪಿ: ಒತ್ತಿನೆಣೆ ಕಾಡು ಪ್ರದೇಶದಲ್ಲಿ ಅಪರಿಚಿತ ಸುಟ್ಟ ಶವ ಪತ್ತೆ

Last Updated : Jul 13, 2022, 7:14 PM IST

ABOUT THE AUTHOR

...view details