ಆನೇಕಲ್: ಇತ್ತೀಚೆಗೆ ನಗರದಲ್ಲಿ ಪುಡಿ ರೌಡಿಗಳ ಕಾಟ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಎಚ್ಚೆತ್ತ ಆನೇಕಲ್ ಉಪವಿಭಾಗ ಪೊಲೀಸ್ ಪ್ರತಿ ಠಾಣಾ ಹಂತದಲ್ಲಿ ಪೆರೇಡ್ಗೆ ಕರೆಸಿ ಎಚ್ಚರಿಕೆ ನೀಡಿದೆ.
ಆನೇಕಲ್ ಉಪವಿಭಾಗದ ಡಿವೈಎಸ್ಪಿ ಹೆಚ್.ಎಂ.ಮಹದೇವಪ್ಪ ನೇತೃತ್ವದಲ್ಲಿ ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ಪೆರೇಡ್ ನಡೆಸಲಾಯಿತು. ಈ ವೇಳೆ ಕರೆದಿದ್ದ ಪೆರೇಡ್ನಲ್ಲಿ ಹಲವು ರೌಡಿಗಳಿಗೆ ಎಚ್ಚರಿಕೆ ಸಹ ನೀಡಲಾಯಿತು. ಉಡಾಫೆ ಮಾತು, ಕೊಲೆ ಬೆದರಿಕೆ, ರಾಜಕಾರಿಣಿಗಳ ಮುಲಾಜಿಗೆ ಬಿದ್ದರೆ ಮನೆಗೆ ನುಗ್ಗಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗತ್ತದೆ ಎಂದು ಡಿವೈಎಸ್ಪಿ ಮಹದೇವಪ್ಪ ಎಚ್ಚರಿಕೆ ನೀಡಿದರು.