ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ನಿವಾಸಿಗಳು ಧರಣಿ ನಡೆಸಿದರು. ನಂತರ, ನಿವೇಶನ ಖರೀದಿಸಿದ ಸುಬ್ರಹ್ಮಣ್ಯ, ಟೆಕ್ಕಿ ಸಂಧ್ಯಾ ಮಾತನಾಡಿದರು. ಹೊಸಕೋಟೆ:ಅವರೆಲ್ಲ ಬೆಂಗಳೂರು ನಗರದ ಹಲವು ಕಂಪೆನಿಗಳಲ್ಲಿ ಕೆಲಸ ಹಾಗೂ ಬಿಸ್ನೆಸ್ ಮಾಡಿಕೊಂಡಿದ್ದಾರೆ. ನಗರದ ಹೊರವಲಯದಲ್ಲಿ ಒಂದು ಸೈಟ್ ತೆಗೆದುಕೊಂಡು, ಕನಸಿನ ಮನೆ ಕಟ್ಟಬೇಕು ಎಂದು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ನಿವೇಶನ ಖರೀದಿ ಮಾಡಿದ್ದಾರೆ. ಆದ್ರೆ ಆರಂಭದಲ್ಲಿದ್ದ ರಸ್ತೆಯನ್ನು ಚೆನ್ನೈ ಕಾರಿಡಾರ್ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಪ್ರಾಧಿಕಾರ ಬಂದ್ ಮಾಡಿದೆ. ಇದರಿಂದ ಆಕ್ರೋಶಗೊಂಡ ಸುಮಾರು 400 ಟೆಕ್ಕಿಗಳು ರಸ್ತೆಗಾಗಿ ಧರಣಿ ಕೈಗೊಂಡಿದ್ದಾರೆ.
ಎನ್ಹೆಚ್ಎಐ ಡಾಬಸ್ಪೇಟೆಯಿಂದ ಹೊಸಕೋಟೆವರೆಗೂ ನಾಲ್ಕು ಪಥದ ರಸ್ತೆ ಕಾಮಗಾರಿ ಹಾಗೂ ಹೊಸಕೋಟೆಯಿಂದ ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಇದೇ ಕಾಮಗಾರಿ ನಡೆಸುತ್ತಿರುವ ಕೊಳತ್ತೂರು ಗ್ರಾಮದ ಹೆದ್ದಾರಿ ಸಂಪರ್ಕ ಕಾರಿಡಾರ್ ಬಳಿ ಬೆಂಗಳೂರಿನ ಟೆಕ್ಕಿಗಳು ಹಾಗೂ ಬಿಸ್ನೆಸ್ಮ್ಯಾನ್ಗಳು ಆದಿತ್ಯಾ ಗ್ರ್ಯಾಂಡ್ ಪ್ಲಾಟ್ಸ್ ಖರೀದಿಸಿದ್ದಾರೆ.
ಇದನ್ನೂ ಓದಿ:ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮುಂದಾದ ಸರ್ಕಾರ: 7 ವಲಯಗಳಲ್ಲಿ ವಿಷನ್ ಗ್ರೂಪ್ ರಚನೆ
ಸುಮಾರು 400 ಕುಟುಂಬಗಳು ಕೋಟ್ಯಂತರ ಬಂಡವಾಳ ಹಾಕಿ ನಿವೇಶನ ಖರೀದಿ ಮಾಡಿದ್ದರು. ಇದೀಗ ರಸ್ತೆ ಕಾಮಗಾರಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರವು ಬಡಾವಣೆಗೆ ತೆರಳುವ ರಸ್ತೆಯನ್ನೇ ಮುಚ್ಚಲಾಗಿದೆ. ನಿವೇಶನ ಖರೀದಿಸಿರುವವರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಪೆಂಡಾಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದೇ ಇದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:Bengaluru Traffic: ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಇಂದಿನಿಂದ ಡ್ರೋನ್ ಕ್ಯಾಮರಾಗಳ ಪ್ರಾಯೋಗಿಕ ಹಾರಾಟ
ಲಿಖಿತ ಭರವಸೆ ನೀಡಿ:''ಆದಿತ್ಯಾ ಗ್ರ್ಯಾಂಡ್ ಬಡವಾಣೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನೇ ಗಮನದಲ್ಲಿ ಇರಿಸಿಕೊಂಡು ಪ್ಲಾಟ್ಸ್ ಖರೀದಿ ಮಾಡಿದ್ದೆವು. 2015ರಲ್ಲೇ ಈ ಹೆದ್ದಾರಿ ನಿರ್ಮಿಸಲು ಪ್ರಕಟಿಸಲಾಗಿತ್ತು. ಆಗ ಕೆಲವು ನಿವೇಶನಗಳು ಈ ಹೆದ್ದಾರಿಗಾಗಿ ಹೋಗಿವೆ. ಆ ವೇಳೆ ನಿವಾಸಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಆಶ್ವಾಸನೆ ನೀಡಿದ್ದರು. ಈಗ ಬಡಾವಣೆ ಸಂಪರ್ಕಿಸುವ ಬಹುತೇಕ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬೇರೆ ರಸ್ತೆಗಳ ಸಂಚಾರ ಮಾಡಬೇಕಾದ ಐದರಿಂದ ಆರು ಕಿಮೀಗಳಷ್ಟು ಸುತ್ತುಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ.
ಹೆದ್ದಾರಿ ಆರಂಭಕ್ಕೂ ಮುನ್ನ ಎನ್ಹೆಚ್ಎಐಯವರು ಬಡಾವಣೆಗಳ ನಿವಾಸಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಪ್ರಸ್ತುತ ಎನ್ಹೆಚ್ಎಐ ಅಧಿಕಾರಿಗಳನ್ನು ಸಂಚಾರಕ್ಕಾಗಿ ರಸ್ತೆ ಬೇಕು ಎಂದು ಕೇಳಿದ್ರೆ, ನೋಡ್ತೀವಿ, ಏನಾದ್ರೂ ವ್ಯವಸ್ಥೆ ಮಾಡುತ್ತೇವೆ ಎಂದು ಮೌಖಿಕ ಭರವಸೆ ಮಾತ್ರ ನೀಡುತ್ತಿದ್ದಾರೆ. ಬಡಾವಣೆ ನಿವಾಸಿಗಳಿಗೆ ಆದಷ್ಟು ಬೇಗ ಸಂಚಾರಕ್ಕಾಗಿ ರಸ್ತೆ ನಿರ್ಮಿಸಿ ಕೊಡಬೇಕು. ಕೂಡಲೇ ಅಧಿಕಾರಿಗಳು ಲಿಖಿತ ಭರವಸೆ ಕೊಟ್ಟರೆ, ಮಾತ್ರ ಧರಣಿ ಹಿಂಪಡೆಯಲಾಗುವುದು'' ಎಂದು ನಿವೇಶನ ಖರೀದಿಸಿದ ಸುಬ್ರಹ್ಮಣ್ಯ, ಟೆಕ್ಕಿ ಸಂಧ್ಯಾ ಸೇರಿದಂತೆ ನಿವಾಸಿಗಳು ಹೇಳಿದರು.
ಇದನ್ನೂ ಓದಿ:Anna Bhagya scheme: ಅನ್ನಭಾಗ್ಯ ಯೋಜನೆಗೆ ಟೆಂಡರ್ ಮೂಲಕ ಅಕ್ಕಿ ಪಡೆಯಲು ಕ್ರಮ- ಸಿಎಂ ಸಿದ್ದರಾಮಯ್ಯ
ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣವನ್ನು ಮೊದಲು ತೆಗೆಯಲಿ, ಡಿ.ಕೆ.ಸುರೇಶ್ಗೆ ರಾಜಕೀಯ ವೈರಾಗ್ಯವಿಲ್ಲ: ಡಿ.ಕೆ.ಶಿವಕುಮಾರ್