ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಸರಣಿ ರಸ್ತೆ ಅಪಘಾತ: 5 ಕಾರು, 4 ಬೈಕ್​ ಜಖಂ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

road accident
ಸರಣಿ ರಸ್ತೆ ಅಪಘಾತ

By

Published : Jan 6, 2023, 1:03 PM IST

Updated : Jan 6, 2023, 2:06 PM IST

ದೇವನಹಳ್ಳಿ(ಬೆಂಗಳೂರು.ಗ್ರಾ): ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯ ಬಳಿ ಸರಣಿ ಅಪಘಾತ ಸಂಭವಿಸಿದೆ. 5 ಕಾರುಗಳು ಮತ್ತು 4 ಬೈಕ್​ಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟಿಪ್ಪರ್ ಲಾರಿ ಚಾಲಕನ ಅತಿ ವೇಗದ ಚಾಲನೆ ಮತ್ತು ಹಠಾತ್ ಬ್ರೇಕ್ ಹಾಕಿದ್ದರ ಪರಿಣಾಮ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಈ ಸಂದರ್ಭದಲ್ಲಿ ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂಭವಿಸಿದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ:ರಸ್ತೆಯಲ್ಲಿ ನೋವಿನಿಂದ ಬಳಲಿದ ಗರ್ಭಿಣಿ; ನೆರೆಹೊರೆ ಜನರ ಸಹಾಯದಿಂದ ಹೆರಿಗೆ ಮಾಡಿಸಿದ ಸಾಮಾನ್ಯ ಮಹಿಳೆ!‘

ಮತ್ತೊಂದು ಅಪಘಾತ: ಅನುಮಾನಾಸ್ಪದ ನಂಬರ್ ಫಲಕವಿರುವ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಸಾವಿಗೆ ಕಾರಣವಾಗಿರುವ ಘಟನೆ ನಿನ್ನೆ ತಡರಾತ್ರಿ ನಾಯಂಡಹಳ್ಳಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಬೈಕ್ ಢಿಕ್ಕಿಯಾಗಿ ವ್ಯಕ್ತಿ ಸಾವು

ವಿಕಲ ಚೇತನ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಅತಿ ವೇಗದಲ್ಲಿ ಬಂದ ಬುಲೆಟ್ ಬೈಕ್ ಢಿಕ್ಕಿಯಾದ ಪರಿಣಾಮ ದೊರೆಸ್ವಾಮಿ (45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕಿನ ಮುಂಭಾಗದಲ್ಲಿ KA 41 E7101 ನಂಬರ್ ನಮೂದಾಗಿದ್ದು ಸೂಪರ್ ಸ್ಪ್ಲೆಂಡರ್​ ಬೈಕ್​ ನಂಬರ್ ಎಂಬುದು ಖಚಿತವಾಗಿದೆ. ಇನ್ನು ಹಿಂಬದಿ ನಂಬರ್ ಫಲಕದಲ್ಲಿ KA 41 E710 ಎಂದಷ್ಟೇ ನಮೂದಾಗಿದೆ. ಕದ್ದ ಬೈಕ್​ನಲ್ಲಿ ಅಪಘಾತವೆಸಗಿದ್ದಾರೆಯೇ? ಅಥವಾ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿದೆಯೇ? ಎಂಬುದು ವಿಚಾರಣೆಯ ವೇಳೆ ಗೊತ್ತಾಗಲಿದೆ ಎಂದು ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ದಾರೆ‌.

2022ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳೆಷ್ಟು?:ದೇಶದಲ್ಲಿ ಕೊರೊನಾ ಲಾಕ್​ಡೌನ್​ ಇದ್ದ ಕಾರಣ ಬೆಂಗಳೂರಿನಲ್ಲಿ 2020- 2021ನೇ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇತ್ತು. ಅನುಕ್ರಮವಾಗಿ 3,236 ಮತ್ತು 3,213 ಅಪಘಾತಗಳಾಗಿತ್ತು. 2018 ರಲ್ಲಿ ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಪ್ರತಿ 10 ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತ್ತಿದ್ದವು. 2022ನೇ ಸಾಲಿನಲ್ಲಿ ಈ ಅನುಪಾತವು 3.5ಕ್ಕೆ ಇಳಿದಿದೆ. ಒಟ್ಟು ಅಪಘಾತಗಳ ಸಂಖ್ಯೆ 3,827ರಷ್ಟಿದೆ. ವಾಹನಗಳ ಏರುಗತಿಗೆ ಹೋಲಿಸಿದಾಗ ನಗರದ ಅಪಘಾತಗಳ ಸಂಖ್ಯೆ ಕಡಿಮೆಯಾಗಿವೆ ಎಂದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ‌.ಸಲೀಂ ಇತ್ತೀಚೆಗೆ ತಿಳಿಸಿದ್ದರು.

ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ ವೈದ್ಯ.. ಓರ್ವ ಸಾವು, ಗರ್ಭಿಣಿಗೆ ಗಾಯ

Last Updated : Jan 6, 2023, 2:06 PM IST

ABOUT THE AUTHOR

...view details