ನೆಲಮಂಗಲ: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದ್ದು, ಬೈಕ್ನ ಹಿಂಬದಿ ಕುಳಿತಿದ್ದ ಬಾಲಕ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ, ಹಿಂಬದಿಯಿಂದ ಬಂದಿರುವ ಟ್ರ್ಯಾಕ್ಟರ್ ಆತನ ಮೈಮೇಲೆ ಹರಿದಿದ್ದು, ಬಾಲಕ ಸ್ಥಳದಲ್ದೇ ಸಾವನ್ನಪ್ಪಿದ್ದಾನೆ.
ನೆಲಮಂಗಲದ ರೇಣುಕಾ ನಗರದ ಬಳಿ ಈ ಘಟನೆ ನಡೆಯಿತು. 15 ವರ್ಷದ ಇಸ್ಲಾಂಪುರ ಗ್ರಾಮದ ಮೊಹ್ಮದ್ ಹ್ಯಾರಿಸ್ ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಮೊಹ್ಮದ್ ಅಲ್ತಾಫ್ ಅಪಾಯದಿಂದ ಪಾರಾಗಿದ್ದಾನೆ.