ಕರ್ನಾಟಕ

karnataka

ETV Bharat / state

ಲಿಂಗಾಯಿತರು ಅಧಿಕವಾಗಿರುವುದರಿಂದ ಸಂಪುಟದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ : ಶಂಕರ್ ಬಿದರಿ - ನಿವೃತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ

ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಕರ್ನಾಟಕದಲ್ಲಿ ಸಿಂಹಪಾಲು ಸಿಗದಿದ್ದರೆ ಬಿಹಾರ, ಉತ್ತರಪ್ರದೇಶ, ರಾಜಸ್ಥಾನದಲ್ಲಿ ಸಿಗುತ್ತಾ?. ಕರ್ನಾಟಕದಲ್ಲಿ ಲಿಂಗಾಯಿತರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ರಾಜ್ಯದ ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ..

Retired IPS Officer Shankar Bidari
ನಿವೃತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ

By

Published : Aug 8, 2021, 5:09 PM IST

ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಚಿವ ಸಂಪುಟದಲ್ಲಿ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ. ಇದಕ್ಕೆ ನಾವು ಖುಷಿ ಪಡಬೇಕು ಎಂದು ನಿವೃತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹೇಳಿದರು.

ಸಂಪುಟದಲ್ಲಿ ಲಿಂಗಾಯಿತರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲು ಕಾರಣ ಹೇಳಿದರು ನಿವೃತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ..

ನಗರದ ಕೊಂಗಾಡಿಯಪ್ಪ ರಸ್ತೆಯಲ್ಲಿರುವ ಡಿಪಿವಿ ಕನ್ವೆನ್​​​ಷನ್ ಹಾಲ್​​ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಅಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಂಕರ್ ಬಿದರಿ ಭಾಗವಹಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಕರ್ನಾಟಕದಲ್ಲಿ ಸಿಂಹಪಾಲು ಸಿಗದಿದ್ದರೆ ಬಿಹಾರ, ಉತ್ತರಪ್ರದೇಶ, ರಾಜಸ್ಥಾನದಲ್ಲಿ ಸಿಗುತ್ತಾ?. ಕರ್ನಾಟಕದಲ್ಲಿ ಲಿಂಗಾಯಿತರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ರಾಜ್ಯದ ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ.

ಇದಕ್ಕೆ ನಾವು ಖುಷಿ ಪಡಬೇಕು. ಇದರಲ್ಲಿ ಯಾವುದೇ ತಪ್ಪಿಲ್ಲ, ಲಿಂಗಾಯತ ಒಂದು ಜಾತಿ ಅಲ್ಲ, ಹಿಂದೂ ಸಮುದಾಯದಲ್ಲಿನ ದಲಿತರನ್ನ ಒಳಗೊಂಡು ಎಲ್ಲಾ ಸಮುದಾಯಗಳ ಧರ್ಮವಾಗಿದೆ ಎಂದರು.

ಓದಿ: ಸಂಪುಟ ದರ್ಜೆ ಸ್ಥಾನಮಾನ ಹಿಂಪಡೆಯುವಂತೆ ಬೊಮ್ಮಾಯಿಗೆ ಬಿಎಸ್​​ವೈ ಪತ್ರ

ಮೈಸೂರು ಪ್ರಾಂತ್ಯದಲ್ಲಿ ಪ್ರಬಲ ಲಿಂಗಾಯತ ಮುಖಂಡರು ಇಲ್ಲದೇ ಇರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಲಿಂಗಾಯತ ಸಮುದಾಯ ಶಂಕರ್ ಬಿದರಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಾಜಕೀಯದ ಬಗ್ಗೆ ಮಾತನಾಡುವುದಿಲ್ಲವೆಂದು ಹೇಳಿದರು.

ABOUT THE AUTHOR

...view details