ಕರ್ನಾಟಕ

karnataka

ETV Bharat / state

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು.. ಸಚಿವ ಎಂಟಿಬಿ- ಶಾಸಕ ಶರತ್ ಮುಖಾಮುಖಿ.. - ಎಂಟಿಬಿ ನಾಗರಾಜ್ ಮತ್ತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಒಂದೇ ವೇದಿಕೆಯಲ್ಲಿ

ಮೊದಲು ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಮಾತನಾಡಲು ಅನುಮತಿ ನೀಡಿದಾಗ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿದ್ದ ಕಾರಣ ವೇದಿಕೆಯಲ್ಲಿ‌ದ್ದ ಶಾಸಕರನ್ನು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಇದಕ್ಕೆ ಕಾರ್ಯಕ್ರಮದಲ್ಲಿ‌ ನೆರೆದಿದ್ದ ಜನ ಜೋರಾಗಿ ಜೈಕಾರ ಕೂಗಿದರು..

Hoskote
ಎಂಟಿಬಿ, ಶರತ್

By

Published : Jan 26, 2021, 8:38 PM IST

ಹೊಸಕೋಟೆ(ಬೆಂ.ಗ್ರಾಮಾಂತರ):ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ಜರುಗಿತು. ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಅಂದ್ರೆ ವಿಧಾನಸಭಾ ಉಪಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಮತ್ತೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎದುರಾಗಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಇಂದು ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಮತ್ತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿದ್ದು ಅಚ್ಚರಿಯಾಗಿತ್ತು.

ಕಾರ್ಯಕ್ರಮವನ್ನು ಸಚಿವ ಎಂಟಿಬಿ ನಾಗರಾಜ್ ಉದ್ಘಾಟಿಸಿದ್ರೆ, ಅಧ್ಯಕ್ಷತೆಯನ್ನು ಶಾಸಕ ಶರತ್ ಬಚ್ಚೇಗೌಡ ವಹಿಸಿದ್ದರು. ಧ್ವಜಾರೋಹಣ ಹಾಗೂ ಪಥ ಸಂಚಲನ ಸ್ವೀಕರಿಸುವ ಸಮಯದಲ್ಲಿ ಇಬ್ಬರೂ ಪಕ್ಕ ಪಕ್ಕ ನಿಂತು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಜನರ ಗಮನ ಸೆಳೆದವು.

ಮೊದಲು ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಮಾತನಾಡಲು ಅನುಮತಿ ನೀಡಿದಾಗ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿದ್ದ ಕಾರಣ ವೇದಿಕೆಯಲ್ಲಿ‌ದ್ದ ಶಾಸಕರನ್ನು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಇದಕ್ಕೆ ಕಾರ್ಯಕ್ರಮದಲ್ಲಿ‌ ನೆರೆದಿದ್ದ ಜನ ಜೋರಾಗಿ ಜೈಕಾರ ಕೂಗಿದರು.

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು

ಶಾಸಕ ಬಚ್ಚೇಗೌಡ ಅವರಿಗೆ ಧ್ವಜಾರೋಹಣ ಮಾಡಲು ಅನುಮತಿ ನೀಡದೆ ಇದ್ದಿದನ್ನು ಪರೋಕ್ಷವಾಗಿ ಮತ್ತು ಎಂಟಿಬಿ ನಾಗರಾಜ್ ಅವರನ್ನು ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಿರೋದಕ್ಕೆ ಪರೋಕ್ಷವಾಗಿ ಕಾಲೆಳೆದರು.

ಇದನ್ನೂ ಓದಿ:ಗಣತಂತ್ರ ವಿಶೇಷ.. ಮಹಿಳಾ ಬೈಕ್ ರ್ಯಾಲಿಗೆ ಸಚಿವ ಎಂಟಿಬಿ ನಾಗರಾಜ್​ ಚಾಲನೆ..

ಮೊದಲು ಮಾತಿಗಿಳಿದ ಶಾಸಕ ಬಚ್ಚೇಗೌಡ, ಕೆಳ ಮನೆಗೆ ಜನರಿಂದ ನೇರವಾಗಿ ಆಯ್ಕೆಯಾದ್ರೆ, ಮೇಲ್ಮನೆಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವವರು, ಹೆಸರು ಮಾಡಿರುವವರನ್ನು ಆಯ್ಕೆ ಮಾಡಿ ಕಳಿಸಬೇಕು. ಆದರೆ, ನಮ್ಮ ರಾಜಕೀಯ ಪಕ್ಷಗಳ ವ್ಯವಸ್ಥೆ ನೋಡುತ್ತಿದ್ದೇವೆ.

ನಮ್ಮ ಸಂವಿಧಾನದಲ್ಲಿ ರಾಜಕೀಯ ಪಕ್ಷಗಳು ತಮಗೆ ಇಷ್ಟ ಬಂದ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ರೀತಿನಾ ನಾವು ಸಂವಿಧಾನವನ್ನು ಪಾಲನೆ ಮಾಡುವುದು, ಪಾಲನೆ ಮಾಡಬೇಕಾದ್ರೆ ಅದರ ಪದಗಳನ್ನ ಅಲ್ಲ. ಅದರ ಹಿಂದಿನ ತತ್ವವನ್ನು ಪಾಲನೆ ಮಾಡಬೇಕು ಎಂದು ಪರೋಕ್ಷವಾಗಿ ಎಂಟಿಬಿ‌ ನಾಗರಾಜ್ ಅವರ ವಿರುದ್ಧ ಕಿಡಿಕಾರಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಇಂದಿನ ರೈತರ ಪ್ರತಿಭಟನೆಗೆ ಹೊಸಕೋಟೆ ಭಾಗದಲ್ಲಿ ವಿರೋಧ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ‌ ಜಾರಿಗೆ ತಂದಿರುವ ಕಾನೂನನ್ನು ರೈತರು‌ ಒಪ್ಪಿದ್ದಾರೆ. ಕೆಲವರು ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಈ ರೀತಿ ಪ್ರತಿಭಟನೆ ಮಾಡ್ತಿದ್ದಾರೆ. ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಪಥ ಸಂಚಲನ‌ ಸ್ವೀಕರಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ಮುಂದಿನ‌ ಆಡಳಿತ ಹಾಗೂ ಅಭಿವೃದ್ಧಿ ಸಂದೇಶ ಈಗಾಗಲೇ ನೀಡಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details