ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗೌರಿ ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದಾಗ ಮಾಜಿ ಪ್ರಿಯತಮ(Ex lover) ಪದೇಪದೆ ಫೋನ್ ಮಾಡುತ್ತಿದ್ದುದಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತಾಲೂಕಿನ ಪಿಂಡಕೊರತಿಮ್ಮನಹಳ್ಳಿ (ಜಯನಗರ)ಯಲ್ಲಿ ಘಟನೆ ನಡೆದಿದ್ದು, ನಿವೇದಿತಾ (22) ನೇಣಿಗೆ ಶರಣಾಗಿರುವ ಗೃಹಿಣಿ. ಮೃತ ಮಹಿಳೆಗೆ 3 ವರ್ಷದ ಹಿಂದೆ ಪಾಲನಜೋಗಿಹಳ್ಳಿಯ ಯುವಕನೊಂದಿಗೆ ಮದುವೆಯಾಗಿತ್ತು. ಮದುವೆಗೂ ಮುನ್ನ ನಿವೇದಿತಾಗೆ ಬಾಯ್ ಫ್ರೆಂಡ್ ಇದ್ದನಂತೆ. ಆದರೆ, ಆಕೆ ಮದುವೆ ನಂತರ ಎಲ್ಲ ಮರೆತು ಪತಿಯೊಂದಿಗೆ ಸಂಸಾರ ನಡೆಸುತ್ತಿದ್ದಳು. ಮದುವೆಯಾಗಿದ್ದರೂ ಮಾಜಿ ಪ್ರಿಯಕರ ಆಕೆಗೆ ಫೋನ್ ಮಾಡಿ ಕಾಡುತ್ತಿದ್ದ ಎನ್ನಲಾಗ್ತಿದೆ.