ಆನೇಕಲ್: ವರ್ಷಗಳ ಹಿಂದೆ ಸಾವನ್ನಪ್ಪಿದ ಪ್ರಿಯತಮೆ ನೆನಪಿನಲ್ಲಿ ಮದ್ಯವ್ಯಸನಿಯಾಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ.
ಪ್ರೇಯಸಿಯ ಸಾವಿನ ನೋವು: ಕುಡಿದ ಮತ್ತಿನಲ್ಲಿ ಆತ್ಮಹತ್ಯೆಗೆ ಯತ್ನ - undefined
ಪ್ರೇಯಸಿಯ ಸಾವಿನ ನೋವಿನಿಂದ ಹೊರ ಬರಲಾಗದೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಕುಡಿದ ಮತ್ತಿನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ. ಬೆಸ್ಟ್ ಆಸ್ಪತ್ರೆಗೆ ದಾಖಲು.
ಆನೇಕಲ್ ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿರುವ ಮುರಳಿ ಮೋಹನ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವ. ನಿನ್ನೆ ರಾತ್ರಿ ಸರಾಯಿ ಕುಡಿದು ಪ್ರೇಯಸಿಯನ್ನೇ ಕನವರಿಸುತ್ತಿದ್ದ ಮುರಳಿ, ಕೊನೆಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಸ್ನೇಹಿತರಿಗೆ ಮೆಸೇಜ್ ಕಳಿಸಿ ಮಾತ್ರೆ ಸೇವಿಸಿದ್ದ. ತಕ್ಷಣವೇ ಜೊತೆಯಲ್ಲಿದ್ದ ಸ್ನೇಹಿತರು ಚಂದಾಪುರದ ಬೆಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಯಸಿಯ ಮೇಲೆ ಆಗಾಗ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಸಾವಿನ ಕುರಿತು ಮಾತನಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.
.