ಕರ್ನಾಟಕ

karnataka

ETV Bharat / state

ನೆಲಮಂಗಲ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ - ನೆಲಮಂಗಲ ತಾಲೂಕು ಪಂಚಾಯಿತಿ

ತಾಲೂಕು ಪಂಚಾಯತ್​ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆವಣೆಯಲ್ಲಿ ಜೆಡಿಎಸ್​ನಿಂದ ವೆಂಕಟಗೌಡ, ಕಾಂಗ್ರೆಸ್​ನಿಂದ ಬಸವನಹಳ್ಳಿ ರಂಗನಾಥ ಸ್ಪರ್ಧಿಸಿದ್ದರು. ಈ ಪೈಪೋಟಿಯಲ್ಲಿ ಬಸವನಹಳ್ಳಿ ರಂಗನಾಥ್ ಅವರು ಗೆಲುವಿನ ನಗೆ ಬೀರಿದ್ದಾರೆ.

Stationary Standing Committee Chairman Ranganath

By

Published : Aug 4, 2019, 11:23 PM IST

ನೆಲಮಂಗಲ:ತಾಲೂಕು ಪಂಚಾಯತ್​ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​​ನ ಬಸವನಹಳ್ಳಿ ರಂಗನಾಥ್ ಗೆಲುವು ಸಾಧಿಸಿದ್ದಾರೆ.

ತಾ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆವಣೆಯಲ್ಲಿ ಜೆಡಿಎಸ್​ನಿಂದ ವೆಂಕಟಗೌಡ, ಕಾಂಗ್ರೆಸ್​ನಿಂದ ಬಸವನಹಳ್ಳಿ ರಂಗನಾಥ ಸ್ಪರ್ಧಿಸಿದ್ದರು. ಇವರಿಬ್ಬರ ಮಧ್ಯೆ ಬಾರಿ ಪೈಪೋಟಿ ಕಂಡುಬಂದಿತ್ತು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

ಒಟ್ಟು 25 ಮತಗಳ ಪೈಕಿ 24 ಮತಗಳು ಚಲಾವಣೆಗೊಂಡಿದ್ದು, 18 ಮತಗಳು ತಾ.ಪಂ. ಸದಸ್ಯರು, 5 ಮತಗಳನ್ನು ನಾಮ ನಿರ್ದೇಶಿತರು, ಒಂದು ಮತವನ್ನು ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಅವರು ಚಲಾಯಿಸಿದ್ದಾರೆ. ಒಟ್ಟು ಚಲಾವಣೆಯಾದ 24 ಮತಗಳಲ್ಲಿ 14 ಮತಗಳನ್ನು ಪಡೆಯುವ ಮೂಲಕ ಬಸವನಹಳ್ಳಿ ರಂಗನಾಥ ಅವರು ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ತಾ.ಪಂ. ಉಪಾಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದರು.

ABOUT THE AUTHOR

...view details