ಬೆಂಗಳೂರು/ಆನೇಕಲ್: ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಆದರೆ ಇದರ ಪರಿವೇ ಇಲ್ಲದಂತೆ ಕಾಂಗ್ರೆಸ್ ಮುಖಂಡ ಹುಟ್ಟುಹಬ್ಬ ಆಚರಿಸಿಕೊಂಡು ಮುಜುಗರಕ್ಕೆ ಈಡಾಗಿದ್ದಾರೆ.
ಲಾಕ್ಡೌನ್ ನಡುವೆ ಕಾಂಗ್ರೆಸ್ ಮುಖಂಡನ ಹುಟ್ಟುಹಬ್ಬ... ಸರ್ಕಾರದ ಆದೇಶ ಉಲ್ಲಂಘನೆ
ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ರಾಜ್ ಗೋಪಾಲ್ ರೆಡ್ಡಿ ಲಾಕ್ಡೌನ್ ನಡುವೆಯೂ ಹುಟ್ಟುಹಬ್ಬ ಆಚರಿಸಿಕೊಂಡು ಲಾಕ್ಡೌನ್ ನಿಯಮ ಮೀರಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಲಾಕ್ಡೌನ್ ನಡುವೆ ಕಾಂಗ್ರೆಸ್ ಮುಖಂಡನ ಹುಟ್ಟುಹಬ್ಬ
ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ರಾಜ್ ಗೋಪಾಲ್ ರೆಡ್ಡಿ ಲಾಕ್ಡೌನ್ ನಡುವೆಯೂ ಹುಟ್ಟುಹಬ್ಬ ಆಚರಿಸಿಕೊಂಡು ಹೆಬ್ಬಗೋಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರ್ತಡೇ ಆಚರಣೆಗೆ ನಿನ್ನೆಯೇ ಹೆಬ್ಬಗೋಡಿ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿತ್ತು.
ಹೀಗಿದ್ದರೂ ಹುಲಿಮಂಗಲದಲ್ಲಿ ಹುಟ್ಟುಹಬ್ಬದ ಆಚರಿಸಿಕೊಳ್ಳಲು ಮುಂದಾಗಿದ್ದ ರಾಜಗೋಪಾಲರೆಡ್ಡಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮನೆ ಬಳಿ ನೂರಾರು ಜನ ಜಮಾಯಿಸಿದ್ದು, ಅದ್ಧೂರಿ ಪ್ಲೆಕ್ಸ್ ರಾರಾಜಿಸಿದ್ದವು. ಇದರಿಂದ ಪೊಲೀಸರು ಕೇಸ್ ಹಾಕಿ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ.