ಕರ್ನಾಟಕ

karnataka

ETV Bharat / state

ಗಲಭೆಕೋರರ ಹೆಡೆಮುರಿ ಕಟ್ಟಲಿದೆ ರಾಜಾಹುಲಿ ಸರ್ಕಾರ: ಆರ್‌.ಅಶೋಕ್ - ಬೆಂಗಳೂರು ಹಲಭೆ ಪ್ರಕರಣ

ಶಾಸಕರಾಗಲೀ ಅಥವಾ ಯಾರೇ ಆಗಲಿ ಅವರನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಈ ಗಲಭೆಯ ಹಿಂದೆ ಯಾವುದೇ ಚಿತಾವಣೆ ಇದ್ದರೂ ತನಿಖೆಯಿಂದ ಗೊತ್ತಾಗಲಿದೆ. ಹಲ್ಲೆ ಮಾಡಿದವರನ್ನು ಜೈಲಿಗಟ್ಟುವವರೆಗೂ ಬಿಡುವುದಿಲ್ಲ ಎಂದು ಸಚಿವ ಆರ್ .ಅಶೋಕ್ ಹೇಳಿದ್ದಾರೆ.

R Ashok reaction about Bangaluru violence
ಕೋವಿಡ್ ಕೇರ್ ಸೆಂಟರ್​​ ಉದ್ಘಾಟಿಸಿದ ಸಚಿವ ಆರ್ ಅಶೋಕ್

By

Published : Aug 12, 2020, 5:36 PM IST

Updated : Aug 12, 2020, 6:35 PM IST

ನೆಲಮಂಗಲ:ರಾಜ್ಯದಲ್ಲಿರುವುದು ರಾಜಾಹುಲಿ ಬಿ.ಎಸ್.​ ಯಡಿಯೂರಪ್ಪನವರ ಸರ್ಕಾರ. ಗಲಭೆಕೋರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಗಲಭೆ ಮಾಡಲು ಬಂದವರನ್ನು ಹೆಡೆಮುರಿ ಕಟ್ಟೇ ಕಟ್ಟುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕೋವಿಡ್ ಕೇರ್ ಸೆಂಟರ್​​ ಉದ್ಘಾಟಿಸಿದ ಸಚಿವ ಆರ್ ಅಶೋಕ್

ತಾಲೂಕಿನ ಬೇಗೂರು ಸಮೀಪದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ 150 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್​ ​ಅನ್ನು ಉದ್ಘಾಟಿಸಿದ ಬಳಿಕ ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತು ಅವರು ಮಾತನಾಡಿದರು.

ಶಾಂತಿ ಕದಡಲು ಬಂದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಶಾಸಕರು ಯಾವ ಪಕ್ಷದವರಾದರೂ ಸರಿ, ಅವರು ನಮ್ಮವರೇ. ಅವರ ಇಡೀ ಕುಟುಂಬವನ್ನು ಸುಡಲು ಬಂದ ಗಲಭೆಕೋರರನ್ನು ಹೆಡೆಮುರಿ ಕಟ್ಟೇ ಕಟ್ಟುತ್ತೇವೆ ಎಂದು ಅಭಯ ನೀಡಿದರು.

ಪೊಲೀಸ್ ಇಲಾಖೆಯಿಂದ ಈ ಗಲಭೆ ನಡೆದಿಲ್ಲ, ಘಟನೆ ನಡೆದ ಕೇವಲ ನಾಲ್ಕು ಗಂಟೆಯಲ್ಲಿ ಗಲಭೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಾದ ನಂತರ ಪೊಲೀಸ್​​ ಕಮೀಷನರ್​ ಜೊತೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಸ್ಥಳ ಪರಿಶೀಲನೆ ನಡೆಸಿದ್ದೇನೆ.

ಗಲಭೆಕೋರರ ಕುರಿತು ಪ್ರತಿಕ್ರಿಯೆ ನೀಡುತ್ತಿರುವ ಕಂದಾಯ ಸಚಿವ ಆರ್.ಅಶೋಕ್

ಕೆಂಪೇಗೌಡರು ಕಟ್ಟಿದ ನಾಡಿದು. ನಾವು ಶಾಂತಿ ಬಯಸುವವರು. ಈ ಏರಿಯಾದಲ್ಲಿ ಹೆಚ್ಚು ಜನರಿದ್ದಾರೆ. ಹಾಗಾಗಿ ಕ್ಷಣದಲ್ಲಿಯೇ ಸಾವಿರಾರು ಜನ ಸೇರಿದ್ದರಿಂದ ಈ ಘಟನೆ ನಡೆದಿದೆ.

ಗಲಭೆ ಹಿಂದೆ SDPI ಹಾಗೂ PFI ಸಂಘಟನೆಗಳ ಕೈವಾಡವಿದೆ ಎಂದು ಜನ ದೂರುತ್ತಿದ್ದಾರೆ. ಇಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ನಮ್ಮ ಕಚೇರಿಗೆ ಬರಲಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಶಾಸಕರೊಂದಿಗೆ ಪಡೆಯುತ್ತೇನೆ. ಯಾರು ದೇಶದ್ರೋಹಿಗಳಿದ್ದಾರೆ ಅವರಿಗೆ ಎಲ್ಲಾ ವಿದ್ಯೆ ಉಪಯೋಗಿಸಿ ಬುದ್ಧಿ ಕಲಿಸಿ ಎಂದು ಪೊಲೀಸರಿಗೆ ಹೇಳಿದ್ದೇನೆ ಎಂದರು.

ಕೋವಿಡ್ ಕೇರ್ ಸೆಂಟರ್​​ ಉದ್ಘಾಟಿಸಿದ ಸಚಿವ ಆರ್ ಅಶೋಕ್

ಗಲಭೆಗೆ ರಾಜಕೀಯ ಹಿನ್ನೆಲೆ ಇದೆಯೇ ಎಂಬ ಪ್ರಶ್ನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಗಲಾಟೆ ಮಾಡಿರುವರು ಮತ್ತು ಶಾಸಕರು ಒಂದೇ ಪಾರ್ಟಿಯವರು. ಶಾಸಕರ ಗೆಲುವಿಗೆ ಶ್ರಮಿಸಿದ್ದವರೇ ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಲವು ಕಾರ್ಪೋರೇಟರ್​ಗಳು ಗಲಭೆ ಹಿಂದೆ ಇದ್ದಾರೆಂಬ ಮಾಹಿತಿ ಪೊಲೀಸರ ಬಳಿ ಇದೆ. ಗಲಭೆ ಹಿಂದೆ ಯಾವುದೇ ಚಿತಾವಣೆ ಇದ್ದರೂ ತನಿಖೆಯಿಂದ ಗೊತ್ತಾಗಲಿದೆ ಎಂದರು.

Last Updated : Aug 12, 2020, 6:35 PM IST

ABOUT THE AUTHOR

...view details