ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಆರ್. ಅಶೋಕ್ - ಆರ್ .ಅಶೋಕ್ ಲೆಟೆಸ್ಟ್ ನ್ಯೂಸ್

ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಆರ್.ಅಶೋಕ್,​ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವೆಂದು ಅಧಿಕಾರದಲ್ಲಿದ್ದಾಗ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ನಮ್ಮದು ಜನಪರವಾದ ಸರ್ಕಾರ. ಖಜಾನೆ ಖಾಲಿ ಆಗೋ ಮಾತೇ ಇಲ್ಲ ಎಂದು ತಿರುಗೇಟು ನೀಡಿದರು.

ಆರ್ .ಅಶೋಕ್
R Ashok

By

Published : Jan 26, 2020, 4:57 PM IST

ದೇವನಹಳ್ಳಿ:ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಆರೋಪ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್ .ಅಶೋಕ್ ತಿರುಗೇಟು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್ .ಅಶೋಕ್

ಇಂದು ಪಟ್ಟಣದ ಜೂನಿಯರ್​ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವೆಂದು ಅಧಿಕಾರದಲ್ಲಿದ್ದಾಗ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ಪ್ರವಾಹ ಬಂದ ಹಿನ್ನೆಲೆ ಸಂತ್ರಸ್ತರ ನೆರವಿಗಾಗಿ ಸರ್ಕಾರ 6 ಸಾವಿರ ಕೋಟಿ ಹಣ ಖರ್ಚು ಮಾಡಿದೆ. ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆ ಬರದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಶಾಸಕರ ಅನುದಾನದ ಹಣವನ್ನು ಕಾಲ ಕಾಲಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಶಾಸಕರು ತಮ್ಮ ಅನುದಾನ ಹಣದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 500 ಕೋಟಿ ಹಣ ಇದೆ. ಐದು ಕೋಟಿಗಿಂತ ಕಡಿಮೆ ಇರುವ ಡಿಸಿ ಖಾತೆಗಳಿಗೆ ಹಣ ನೀಡಲಾಗ್ತಿದೆ. ಹಿಂದಿನ ಸರ್ಕಾರದಲ್ಲಿ ಹಣಕ್ಕಾಗಿ ಜಿಲ್ಲಾಧಿಕಾರಿಗಳು ವಿಧಾನಸೌದಕ್ಕೆ ವರ್ಷಗಟ್ಟಲೆ ಅಲೆಯ ಬೇಕಿತ್ತು. ಅಲೆದರೂ ಹಣ ಬಿಡುಗಡೆ ಆಗಿರಲಿಲ್ಲ. ಎಲ್ಲರ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಹಣವನ್ನು ತ್ವರಿತವಾಗಿ ಖರ್ಚು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸರ್ಕಾರದ ಖಜಾನೆ ಖಾಲಿಯಾಗಿದೆಯೆಂದು ಸಿದ್ದರಾಮಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರೆ ಖುದ್ದು ಜಿಲ್ಲಾಧಿಕಾರಿಗಳ ಅಕೌಂಟ್​ಗಳ ಪರಿಶೀಲನೆ ಮಾಡಿದರೆ ಸತ್ಯ ಗೊತ್ತಾಗಲಿದೆ ಎಂದು ಖಡಕ್​ ಉತ್ತರ ನೀಡಿದರು.

ನಮ್ಮದು ಜನಪರ ಸರ್ಕಾರ. ಖಜಾನೆ ಖಾಲಿ ಆಗೋ ಮಾತೇ ಇಲ್ಲ. ಸಂಪನ್ಮೂಲ ಕ್ರೂಢಿಕರಣದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ದಿವಾಳಿ ಆಗಿದೆ. ನಮ್ಮದು ಸಮೃದ್ಧ ಸರ್ಕಾರವೆಂದು ಸಿದ್ದರಾಮಯ್ಯನವರ ಟೀಕೆಗೆ ಪ್ರತ್ಯುತ್ತರ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. ಯಾವ ರೀತಿ ನಿಭಾಯಿಸಬೇಕೆನ್ನುವುದು ಅವರಿಗೆ ಗೊತ್ತಿದೆ. ಗೆದ್ದವರನ್ನು ಮಂತ್ರಿ ಮಾಡೋದು ನಮ್ಮ ಮೊದಲ ಆದ್ಯತೆ. ಹಾಗೆಯೇ ಸರ್ಕಾರ ಬರಲಿಕ್ಕೆ ಕಾರಣಕರ್ತರಾದವನ್ನು ಮರೆಯುವುದಿಲ್ಲ. ಮುಖ್ಯಮಂತ್ರಿಗಳು ಅದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಚನೆ ಮಾಡಲಿದ್ದಾರೆ. ಸದ್ಯಕ್ಕೆ ಗೆದ್ದವರಿಗೆ ಮಾತ್ರ ಮಂತ್ರಿ ಸ್ಥಾನವೆಂದು ಖಚಿತ ಪಡಿಸಿದರು.

ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟಿರುವ ಶ್ರೀರಾಮುಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರವರನ್ನು ಭೇಟಿಯಾದ ಬಗ್ಗೆ ಮಾತನಾಡಿ, ಸಚಿವರು ಉಪಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದೆ. ಉಪಮುಖ್ಯಮಂತ್ರಿ ಸ್ಥಾನ ಕೊಡುವುದು ಬಿಡುವುದು ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ. ಹೇಳಿಕೆಗಳು ಅವರ ವೈಯಕ್ತಿಕ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೆದರಿಕೆ ಪತ್ರ ಬಂದಿರೋದು ಸುಳ್ಳು ಸುದ್ದಿ. ಕುಮಾರಸ್ವಾಮಿ ಊರಿಗೆಲ್ಲಾ ಬೆದರಿಕೆ ಹಾಕಬಹುದು. ಅವರಿಗೆ ಯಾರು ಬೆದರಿಕೆ ಹಾಕ್ತಾರೆ. ಬೆದರಿಕೆ ಬಂದ್ರೆ ಕಾನೂನು, ಪೊಲೀಸ್ ಇದೆ , ಮುಖ್ಯಮಂತ್ರಿ ಆಗಿದ್ದವರು ಎಲ್ಲಿ ಏನು ಮಾಡಬೇಕೆಂದು ಅವರಿಗೆ ಗೊತ್ತಿದೆಯೆಂದು ಕಂದಾಯ ಸಚಿವ ಆರ್.ಅಶೋಕ್, ಕುಮಾರಸ್ವಾಮಿಯರ ಕಾಲೆಳೆದರು.

ABOUT THE AUTHOR

...view details