ನೆಲಮಂಗಲ:ಮಸೀದಿಯಲ್ಲಿ ರಂಜಾನ್ ಪ್ರಯುಕ್ತ ಮೈಕ್ನಲ್ಲಿ ಜೋರಾಗಿ ಆಜಾನ್ ಕೂಗಿದ ಬಗ್ಗೆ ವಿಚಾರಿಸಲು ಹೋದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಆನಂದನಗರದಲ್ಲಿ ನಡೆದಿದೆ.
ರಂಜಾನ್ ಆಜಾನ್ ಕೂಗುವ ವಿಚಾರದಲ್ಲಿ ಗಲಾಟೆ, 22 ಜನರ ವಿರುದ್ಧ ಪ್ರಕರಣ
ನೆಲಮಂಗಲ ತಾಲೂಕಿನ ಆನಂದನಗರ ಗ್ರಾಮದ ಮಸೀದಿಯ ಮೈಕ್ನಲ್ಲಿ ರಂಜಾನ್ ಆಜಾನ್ ಜೋರಾಗಿ ಕೂಗಿದ ಹಿನ್ನೆಲೆ, ಈ ಬಗ್ಗೆ ವಿಚಾರಿಸಲು ಹೋದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಮಸೀದಿಯಲ್ಲಿ ಜೋರಾದ ಶಬ್ಧ ಮಾಡಿಕೊಂಡು ಆಜಾನ್ ಕೂಗುತ್ತಿದ್ದರು. ಅತಿಯಾದ ಶಬ್ಧದಿಂದ ತೊಂದರೆಗೊಳಗಾದ ಗ್ರಾಮಸ್ಥರು, ಜೋರಾಗಿ ಮೈಕ್ನಲ್ಲಿ ಕೂಗಬೇಡಿ ಎಂದು ಮನವಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಗ್ರಾಮದ ಎರಡು ಕೋಮಿನವರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟವಾಗಿದೆ. ಬಳಿಕ ಗ್ರಾಮಸ್ಥರ ಮೇಲೆ ಹಲ್ಲೆ ನಡೆದಿದೆ.
ತಕ್ಷಣ ಸ್ಥಳಕ್ಕಾಮಿಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ವಿಚಾರಣೆ ನಡೆಸಿ, ಹಲ್ಲೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 22 ಜನರ ವಿರುದ್ಧ ಪ್ರಕರಣ ದಾಖಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.