ಕರ್ನಾಟಕ

karnataka

ETV Bharat / state

ಶಂಕಿತ ಕೊರೊನಾ ವ್ಯಕ್ತಿಗಳ ಮಕ್ಕಳಿಗೂ ಐಸೋಲೇಷನ್​​​​ ಕೇಂದ್ರದಲ್ಲಿ ಕ್ವಾರಂಟೈನ್​​​​​ - ದೇವನಹಳ್ಳಿಯ ಆಕಾಶ್ ಆಸ್ಪತ್ರೆ

ರಾಜ್ಯದಲ್ಲಿ ಕೊರೊನಾ ಸೋಂಕು ಮಕ್ಕಳಿಗೂ ತಗುಲಿರುವ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಐಸೋಲೇಷನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ.

Quarantine at the Isolation Center for Children of Suspected Coronavirus Infections
ಶಂಕಿತ ಕೊರೊನಾ ವೈರಸ್ ಸೋಂಕಿತರ ಮಕ್ಕಳಿಗೂ ಐಸೋಲೇಷನ್ ಕೇಂದ್ರದಲ್ಲಿ ಕ್ವಾರಂಟೈನ್

By

Published : Mar 26, 2020, 9:09 PM IST

ದೇವನಹಳ್ಳಿ: ರಾಜ್ಯದಲ್ಲಿ ಕೊರೊನಾ ಸೋಂಕು ಮಕ್ಕಳಿಗೂ ತಗುಲಿರುವ ಹಿನ್ನೆಲೆಯಲ್ಲಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಐಸೋಲೇಷನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ.

ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ಹದಿನಾಲ್ಕು ವರ್ಷದೊಳಗಿರುವ ಮಕ್ಕಳಿಗೆ 30 ಬೆಡ್​ಗಳನ್ನು ಹೊಂದಿರುವ ಕ್ವಾರಂಟೈನ್ ಕೇಂದ್ರವನ್ನ ಸ್ಥಾಪಿಸಲಾಗಿದ್ದು, ಮಕ್ಕಳಿಗೆ ಅವಶ್ಯವಾಗಿ ಬೇಕಾಗದಂತಹ ಆಟದ ವಸ್ತುಗಳು ಸೇರಿದಂತೆ ದಿನನಿತ್ಯದ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಇನ್ನು ಕ್ವಾರಂಟೈನ್​​ನಲ್ಲಿರುವ ಶಂಕಿತ‌ ಕೊರೊನಾ ವ್ಯಕ್ತಿಗಳು ತಮ್ಮ ಮಕ್ಕಳೊಂದಿಗಿರುವುದರಿಂದ ಕೊರೊನಾ ವೈರಸ್ ಸೋಂಕು ಇವರಿಗೂ ಬಂದಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವ ಮೂಲಕ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.


ABOUT THE AUTHOR

...view details