ದೇವನಹಳ್ಳಿ :ದಕ್ಷಿಣ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನೇರ ವಿಮಾನಯಾನವನ್ನು ಇದೇ ಮೊದಲ ಬಾರಿಗೆ ಕ್ವಾಂಟಾಸ್ ಏರ್ವೇಸ್ ಆರಂಭಿಸಿದೆ. ಇಂದಿನಿಂದ ವಾರದಲ್ಲಿ ನಾಲ್ಕು ದಿನ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ವಿಮಾನ ಸೇವೆ ಇರಲಿದೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇದೇ ಮೊದಲ ಬಾರಿಗೆ ಸಿಡ್ನಿ ಮತ್ತು ಬೆಂಗಳೂರು ನಡುವೆ ನೇರ ವಿಮಾನಯಾನ ಆರಂಭವಾಗಿದೆ. QF67 ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಡ್ನಿಗೆ ವಾರದಲ್ಲಿ ನಾಲ್ಕು ಬಾರಿ ಹಾರಾಟ ನಡೆಸಲಿದೆ.