ಕರ್ನಾಟಕ

karnataka

By

Published : Oct 20, 2022, 2:08 PM IST

ETV Bharat / state

ಕಾಂಗ್ರೆಸ್​ನ ಸುಳ್ಳು ಪ್ರಚಾರಕ್ಕೆ ಸ್ಪಷ್ಟ ಉತ್ತರ ಕೊಡಿ, ಸರ್ಕಾರದ ಸಾಧನೆ ಮುಂದಿಡಿ: ಕಾರ್ಯಕರ್ತರಿಗೆ ಸುನೀಲ್ ಕುಮಾರ್ ಕರೆ

ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳು, ನಾಲ್ಕು ಮನೆಗಳ ಮಧ್ಯದಲ್ಲಿ ವಿಚಾರಧಾರೆ ಹಂಚಿಕೊಂಡು ಸಂಘಟನೆಗಳು ಬೆಳೆದು ಬಂದಿದ್ದವು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ಅಲ್ಲದೇ, ಇಂದು ಮಾಧ್ಯಮಗಳ ಮೂಲಕ ಹೆಚ್ಚು ಸಂಗತಿ ತಿಳಿಸಬೇಕಾದ ವೇಗದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಕಾಂಗ್ರೆಸ್​ನ ಸುಳ್ಳು ಪ್ರಚಾರಕ್ಕೆ ಸ್ಪಷ್ಟ ಉತ್ತರ ಕೊಡಿ, ಸರ್ಕಾರದ ಸಾಧನೆ ಮುಂದಿಡಿ: ಕಾರ್ಯಕರ್ತರಿಗೆ ಸುನೀಲ್ ಕುಮಾರ್ ಕರೆ
put forward the achievements of the government: Sunil Kumar's call to the activists

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸುಳ್ಳುಪ್ರಚಾರಕ್ಕೆ ನಮ್ಮ ಕಾರ್ಯಕರ್ತರು ಸ್ಪಷ್ಟ ಉತ್ತರ ಕೊಡಬೇಕು, ನಮ್ಮ ಸರ್ಕಾರಗಳ ಜನಪರ ಕೆಲಸಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದ ವಯ್ಯಾಲಿಕಾವಲ್‍ನ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಇಂದು ನಡೆದ ಬಿಜೆಪಿ ಎಂಟು ಮೋರ್ಚಾಗಳ ‘ಮಾಧ್ಯಮ ಮಂಥನ’, ಮೋರ್ಚಾಗಳ ಮಾಧ್ಯಮ ಸಂಚಾಲಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಹತ್ತು ಬಾರಿ ಸುಳ್ಳನ್ನು ಹೇಳಿ ಅದನ್ನು ಸತ್ಯ ಎಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ, ಅದನ್ನು ಜನ ನಂಬುತ್ತಿಲ್ಲ. ಆದರೂ, ಅದನ್ನು ತಪ್ಪಿಸಲು ನಾವು ಹೆಚ್ಚು ಜಾಗೃತರಾಗಬೇಕು; ಇದಕ್ಕಾಗಿ ನಮ್ಮ ವಿಷಯಗಳನ್ನು ಸಮರ್ಥವಾಗಿ ಹಾಗೂ ಸಕಾಲಿಕವಾಗಿ ಜನರಿಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.

ಅಪಪ್ರಚಾರಗಳೇ ಸದ್ದು ಮಾಡುತ್ತಿವೆ. ಒಳ್ಳೆಯ ವಿಚಾರಗಳಿಗೆ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ. ನಮ್ಮ ಸರ್ಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಮತಾಂತರ ನಿಷೇಧ, ಗೋಹತ್ಯಾ ನಿಷೇಧ ಮತ್ತು ಗೋಶಾಲೆಗಳ ನಿರ್ಮಾಣ, ಗ್ರಾಮ ಒನ್ ಯೋಜನೆ, ಯಶಸ್ವಿನಿ ಯೋಜನೆ ಮರುಜಾರಿಯಂಥ ವಿಚಾರಗಳನ್ನು ನಮ್ಮ ತಂಡವು ಜನರಿಗೆ ತಿಳಿಸಬೇಕು. ಯಶಸ್ವಿನಿ ಯೋಜನೆ ಹಿಂದಿನ ಸರ್ಕಾರ ಕೈಬಿಟ್ಟಿತ್ತು. ನಾವು ಮತ್ತೆ ಜಾರಿಗೆ ತಂದಿದ್ದೇವೆ ಅವುಗಳನ್ನು ತಿಳಿಸಿ ಜನಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು.

ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳು, ನಾಲ್ಕು ಮನೆಗಳ ಮಧ್ಯದಲ್ಲಿ ವಿಚಾರಧಾರೆ ಹಂಚಿಕೊಂಡು ಸಂಘಟನೆಗಳು ಬೆಳೆದು ಬಂದಿದ್ದವು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ಅಲ್ಲದೇ, ಇಂದು ಮಾಧ್ಯಮಗಳ ಮೂಲಕ ಹೆಚ್ಚು ಸಂಗತಿ ತಿಳಿಸಬೇಕಾದ ವೇಗದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

ಸರ್ಕಾರದ ಕಾರ್ಯಕ್ರಮಗಳು ಮತ್ತು ಪಕ್ಷದ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿದ 72 ಗಂಟೆಯೊಳಗೆ ಪಿಂಚಣಿ ಕೊಡುವ ಕಂದಾಯ ಇಲಾಖೆಯ ದೊಡ್ಡ ಕಾರ್ಯಕ್ರಮ. ಇಂಧನ ಇಲಾಖೆಯಿಂದ ಜಾರಿಗೊಳಿಸಲಾದ ಬೆಳಕು ಯೋಜನೆ, ಅಮೃತ ಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ಕೊಡುವ ಕಾರ್ಯಕ್ರಮ, ಸ್ತ್ರೀಶಕ್ತಿ ಗುಂಪುಗಳಿಗೆ 1 ಲಕ್ಷ ಅನುದಾನ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಗಳು, ಕೇಂದ್ರದ ಬಿಜೆಪಿ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಕೊಡುತ್ತಿರುವ ಉಚಿತ ಪಡಿತರದಂಥ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು.

20 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯ ಲಾಭ ಸಿಗುತ್ತಿದೆ. ಮೀಸಲಾತಿ ಹೆಚ್ಚಳ ವಿಚಾರವನ್ನು ಮೋರ್ಚಾಗಳು ಜನಮಾನಸಕ್ಕೆ ತಿಳಿಸಬೇಕಿದೆ. 2 ಸಾವಿರ ಕೋಟಿ ರೂಪಾಯಿ ಮೌಲ್ಯದ ವಕ್ಫ್ ಬೋರ್ಡ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿದ ಹಗರಣ ನಡೆದಿದೆ. ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಇದನ್ನು ತಿಳಿಹೇಳಬೇಕು. ಕೇವಲ ಪತ್ರಿಕಾಗೋಷ್ಠಿ ಮಾಡಿದರೆ ಸಾಲದು. ಸಣ್ಣ ವಿಡಿಯೋ, ಕರಪತ್ರದಂಥ ಅವಕಾಶಗಳನ್ನೂ ಬಳಸಿಕೊಳ್ಳಿ. ದಿನ ಬೆಳಗ್ಗೆ ಪತ್ರಿಕೆಯನ್ನು ನೋಡಿ ಬಳಿಕ ಪ್ರತಿಕ್ರಿಯೆ ಕೊಡಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನವರಿಗೆ ಕಾಮಾಲೆ ಕಣ್ಣು, ಆ ಪಕ್ಷಕ್ಕೆ ಡೈವೋರ್ಸ್ ಕೊಟ್ಟು ಬಂದೆ‌: ಬಿ ಸಿ ಪಾಟೀಲ್

ABOUT THE AUTHOR

...view details