ಬೆಂಗಳೂರು :ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಿರ್ದೇಶಕ ಪುಣ್ಯಟ್ಟ ಕಣಗಾಲ್ ಅವರು ಎಂದೆಂದೂ ಮರೆಯದ ಹೆಸರು ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಬಣ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪುಟ್ಟಣ್ಣ ಕಣಗಾಲ್ (ಟ್ರಸ್) ವತಿಯಿಂದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದ ಸಂಭ್ರಮ 'ಜನುಮ ಜನುಮದ ಅನುಬಂಧ' ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
'ಗೆಜ್ಜಪೂಜೆ' ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳ ಜೊತೆಗೆ ಹರವಸ್ತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿಕೊಂಡರು. ಚಿತ್ರವೊಂದು ಜನ ಸಾಮಾನ್ಯರ ಮೇಲೆ ತನ್ನ ನೈಜತೆಯಿಂದ ಎಂತಹ ಪರಿಣಾಮವನ್ನು ಉಂಟು ಮಾಡ ಬಎದು ಎನ್ನುವುದಕ್ಕೆ ಪುಟಾನವದ ಚಿತ್ರಗಳೇ ಸಾಕ್ಷಿ. ಪುಟ್ಟಣ್ಣನವರು ಹುಟ್ಟು ಹಾಕಿದ ಕಲಾವಿದರೆಲ್ಲರೂ ಎತ್ತರಕ್ಕೆ ಬೆಳೆದಿದ್ದು, ರಜನಿಕಾಂತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದರು ಎಂದರು.
ಚಿತ್ರನಟ ಶ್ರೀನಾಥ್ ಮಾತನಾಡಿ, ಪುಟ್ಟಣ್ಣನವರು ನನಗೆ ಮರುಜನ್ಮ ನೀಡಿದ ಗುರು. ಅವರು ಒಂದು ರೀತಿಯಲ್ಲಿ ವಿದ್ಯೆಯ ಪರ್ವತ, ಅವರು ಕಲಿಸಿದ್ದರಲ್ಲಿ ಶೇ.40ರಷ್ಟನ್ನು ತಮ್ಮಿಂದ ಮಾಡಲು ಆಗಲಿಲ್ಲ. ಸದಾ ಪರಿಪೂರ್ಣತೆಗೆ ಅವರು ಒತ್ತು ನೀಡುತ್ತಿದ್ದರು ಎಂದು ಹೇಳಿದರು.