ಕರ್ನಾಟಕ

karnataka

ETV Bharat / state

ಅನ್ಯ ಭಾಷೆಗಳ ಬೋರ್ಡ್​ಗಳಿಗೆ ಮಸಿ ಬಳಿದ ಕನ್ನಡಪರ ಸಂಘಟನೆ ಕಾರ್ಯಕರ್ತರು.. - Kannada organizations news

ಹಿಂದಿ ಭಾಷೆಯ ಹೇರಿಕೆ ನಂತರ ರಾಜ್ಯಾದ್ಯಂತ ಹಲವಾರು ಕನ್ನಡಪರ ಸಂಘಟನೆಗಳು ಇದರ ವಿರುದ್ಧ ತಿರುಗಿಬಿದ್ದಿವೆ. ಈ ಹಿನ್ನೆಲೆ ಎಲ್ಲೆಲ್ಲಿ ಕನ್ನಡೇತರ ಫಲಕಗಳಿವಿಯೋ ಅಲ್ಲಲ್ಲಿ ಮಸಿ ಬಳಿದು ಕನ್ನಡಪರ ಸಂಘಟನೆಗಳು ತಮ್ಮ ಆಕ್ರೋಶ ಹೊರಹಾಕುತ್ತಿವೆ.

ಕನ್ನಡೇತರ ಬೋರ್ಡ್​ಗಳಿಗೆ ಮಸಿ

By

Published : Sep 24, 2019, 8:47 PM IST

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರ ದಾಬಸ್‌ಪೇಟೆಯ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು, ಏಕಾಏಕಿ ಕನ್ನಡೇತರ ಭಾಷೆಗಳಿರುವ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಡಾಬಸ್‍ಪೇಟೆ ಪಟ್ಟಣದಲ್ಲಿ ಏಕಾಏಕಿ ಕಾರು ಮತ್ತು ಬೈಕ್​ಗಳಲ್ಲಿ ಬಂದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ನಾಮಫಲಕಳಿಗೆ ಮಸಿ ಬಳಿದಿದ್ದಾರೆ. ಇದಲ್ಲದೆ, ನಾಮಫಲಕಗಳನ್ನೂ ಹರಿದು ಹಾಕಿದ್ದಾರೆ.

ಕನ್ನಡೇತರ ಬೋರ್ಡ್​ಗಳಿಗೆ ಮಸಿ ಬಳಿಯುತ್ತಿರುವ ಕನ್ನಡಪರ ಹೋರಾಟಗಾರರು..

ಕನ್ನಡಪರ ಸಂಘಟನೆಯ ಕಾರ್ಯಕರ್ತರ ಈ ಕೆಲಸಕ್ಕೆ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟ ಮಾಡುವ ಬದಲು ನಮಗೆ ತಿಳುವಳಿಕೆ ನೀಡಿದ್ದರೆ ಸರಿಪಡಿಸಿಕೊಳ್ಳುತ್ತಿದ್ದೆವು. ಏಕಾಏಕಿ ಬಂದು ನಾಮಫಲಕಗಳನ್ನು ಹರಿದು ಹಾಕಿದ್ದು ಮತ್ತು ನಾಮಫಲಕಗಳಿಗೆ ಮಸಿ ಬಳಿದಿದ್ದು ಕನ್ನಡಪರ ಸಂಘಟನೆಗಳಿಗೆ ಶೋಭೆ ತರುವ ಕೆಲಸವಲ್ಲವೆಂದು ಬೇಸರ ವ್ಯಕ್ತ ಪಡಿಸಿದರು.

ABOUT THE AUTHOR

...view details