ಕರ್ನಾಟಕ

karnataka

ETV Bharat / state

ವೃದ್ಧ ದಂಪತಿ ಕಷ್ಟಕ್ಕೆ ಮರುಗಿದ ಪಿಎಸ್​ಐ​​: ಈ ಜೀವಗಳ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿ - ಪೊಲೀಸ್ ಸಬ್ ಇನ್ಸ್​​​​ಪೆಕ್ಟರ್

ಹಣ, ಒಡವೆ ಕಳೆದುಕೊಂಡು ದಿಕ್ಕು ತೋಚದಂತಾದ ವೃದ್ಧ ದಂಪತಿಯ ನೆರವಿಗೆ ಬಂದ ಪೊಲೀಸ್ ಸಬ್ ಇನ್ಸ್​​​​ಪೆಕ್ಟರ್ ಪ್ರದೀಪ್ ಪೂಜಾರಿ, ಹಿರಿಜೀವಗಳನ್ನು ದತ್ತು ಪಡೆದು, ಅವರ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.

PSI Pradeep Poojari
ವೃದ್ಧ ದಂಪತಿ ಕಷ್ಟಕ್ಕೆ ಮರುಗಿದ ಪಿಎಸ್​ಐ

By

Published : Jun 23, 2020, 12:22 PM IST

ದೇವನಹಳ್ಳಿ: ಅಪರಿಚಿತ ವ್ಯಕ್ತಿಯ ವಂಚನೆಯಿಂದ ಕೂಡಿಟ್ಟ ಹಣ, ಒಡವೆ ಕಳೆದುಕೊಂಡ ವೃದ್ಧ ದಂಪತಿ ಕಷ್ಟ ಆಲಿಸಿದ ಪೊಲೀಸ್ ಸಬ್ ಇನ್ಸ್​​​​ಪೆಕ್ಟರ್, ಅವರನ್ನು ಜೀವನವಿಡೀ ನೋಡಿಕೊಳ್ಳುವ ಭರವಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಬಸವನಪುರ ಗಾಮದಲ್ಲಿ ಬಾಡಿಗೆ ಮನೆಯಲ್ಲಿ ನರಸಿಂಹಪ್ಪ (80) ಹಾಗೂ ಗಂಗಮ್ಮ (75) ವೃದ್ಧ ದಂಪತಿ ವಾಸವಾಗಿದ್ದಾರೆ. ಮಕ್ಕಳಿಲ್ಲದ ಇವರು ಸರ್ಕಾರ ಕೊಡುವ ವೃದ್ಧಾಪ್ಯ ವೇತನದಲ್ಲಿ ಜೀವನ ನಡೆಸುತ್ತಿದ್ದರು. ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರು. ಇವರನ್ನು ಭೇಟಿ ಮಾಡಿದ್ದ ಅಪರಿಚಿತ ವ್ಯಕ್ತಿಯೋರ್ವ ತಾನು ಬ್ಯಾಂಕ್​​ ಸಿಬ್ಬಂದಿ ಎಂದು ಹೇಳಿಕೊಂಡು ಖಾತೆಯ ಮಾಹಿತಿ ಪಡೆದು ಹಣ ಒಡವೆಯನ್ನೆಲ್ಲ ಲಪಟಾಯಿಸಿದ್ದಾನೆ.

ವೃದ್ಧ ದಂಪತಿ ಕಷ್ಟಕ್ಕೆ ಮರುಗಿದ ಪಿಎಸ್​ಐ

ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಸಹಾಯದಿಂದ ವಿಶ್ವನಾಥಪುರ ಠಾಣೆಯಲ್ಲಿ ವೃದ್ಧ ದಂಪತಿ ದೂರು ದಾಖಲಿಸಿದ್ದರು. ಇವರ ಪರಿಸ್ಥಿತಿ ನೋಡಿ ಮರುಗಿದ ಪಿಎಸ್ಐ ಪ್ರದೀಪ್ ಪೂಜಾರಿ, ಹಿರಿಜೀವಗಳನ್ನು ದತ್ತು ಪಡೆದು, ಅವರ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.

ಜೀವನವಿಡೀ ನಾನು ಅವರನ್ನು ನೋಡಿಕೊಳ್ಳುತ್ತೇನೆ. ಅವರ ಆರೋಗ್ಯ, ಮನೆ ಬಾಡಿಗೆ, ಸೇರಿದಂತೆ ಇತರ ಏನೇ ಸಮಸ್ಯೆ ಇದ್ದರೂ ಅದರ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ. ವಂಚನೆ ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ವೃದ್ಧ ದಂಪತಿಗಳಿಗೆ ನ್ಯಾಯ ಒದಗಿಸುತ್ತೇನೆ ಎಂದು ಪಿಎಸ್ಐ ತಿಳಿಸಿದ್ದಾರೆ.

ವೃದ್ಧ ದಂಪತಿ ಮುಖದಲ್ಲಿ ಇದೀಗ ನಗು ಮೂಡಿದ್ದು, ಸಬ್ ಇನ್ಸ್​​​​ಪೆಕ್ಟರ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details