ಕರ್ನಾಟಕ

karnataka

ETV Bharat / state

ಪಶು ಆಹಾರ ದರ ಏರಿಕೆ ಖಂಡಿಸಿ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

ಹಾಲಿನ ದರ ಏರಿಕೆ ಮಾಡದ ಸರ್ಕಾರ ಪಶು ಆಹಾರವನ್ನು ಮಾತ್ರ ಪದೇ ಪದೆ ಹೆಚ್ಚಳ ಮಾಡುತ್ತಿದೆ. ಹೀಗಾಗಿ ನವೆಂಬರ್ 8 ರಂದು ಅನಿರ್ದಿಷ್ಟಾವಧಿ ಧರಣಿಯನ್ನ ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದಕ ಘಟಕದ ಮುಂಭಾಗ ಹಮ್ಮಿಕೊಂಡಿದ್ದೇವೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಬರಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Kodihalli Chandrashekar
ಕೋಡಿಹಳ್ಳಿ ಚಂದ್ರಶೇಖರ್

By

Published : Oct 28, 2022, 11:08 AM IST

ದೊಡ್ಡಬಳ್ಳಾಪುರ: ಪಶು ಆಹಾರ ದರವನ್ನು ಸರ್ಕಾರ ಪದೇ ಪದೆ ಏರಿಕೆ ಮಾಡುತ್ತಿದೆ. ಆದರೆ ಹಾಲಿನ ದರ ಏರಿಕೆಯಲ್ಲಿ ಉದಾಸೀನತೆ ತೋರುತ್ತಿದೆ. ಹೈನುಗಾರಿಕೆಯನ್ನ ರೈತರಿಗೆ ಲಾಭದಾಯಕ ಉದ್ದಿಮೆಯಾಗಿ ಮಾಡುವ ಬದಲಿಗೆ ರೈತರಿಗೆ ಹೊರೆಯನ್ನಾಗಿ ಮಾಡುತ್ತಿರುವ ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನವೆಂಬರ್ 8 ರಂದು ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದನಾ ಘಟಕದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹಾಲಿನ ದರ ಏರಿಕೆ ಮಾಡದ ಸರ್ಕಾರ ಪಶು ಆಹಾರವನ್ನು ಮಾತ್ರ ಪದೇ ಪದೆ ಹೆಚ್ಚಳ ಮಾಡುತ್ತಿದೆ. ವೈಜ್ಞಾನಿಕವಾಗಿ ಹಾಲಿನ ದರವನ್ನು 100 ರೂ.ಗೆ ಏರಿಕೆ ಮಾಡಬೇಕು. ಆದರೆ, ನಾವು ಕೇಳುತ್ತಿರುವುದು 40 ರೂಪಾಯಿ ನಿಗದಿ ಮಾಡಿ ಎಂದು. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ನವೆಂಬರ್ 8 ರಂದು ಅನಿರ್ದಿಷ್ಟಾವಧಿ ಧರಣಿಯನ್ನ ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದಕ ಘಟಕದ ಮುಂಭಾಗ ಹಮ್ಮಿಕೊಂಡಿದ್ದೇವೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಬರಲಿದ್ದಾರೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್

ಇದನ್ನೂ ಓದಿ:ಕಲ್ಲಿಗೂ ಹಾಲುಣಿಸುವ ಕಾಮಧೇನು... ಶಿವಮೊಗ್ಗದಲ್ಲಿ ಅಚ್ಚರಿ ಮೂಡಿಸಿದ ಹಸು!

ಗೋಹತ್ಯೆ ನಿಷೇಧ ಕಾಯ್ದೆ:ಯಾವುದೇ ರೈತ ಗೋ ಹತ್ಯೆಯನ್ನು ನಿಷೇಧ ಮಾಡಿ ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಅದು ಬಿಜೆಪಿ ಮತ್ತು ಆರ್​ಎಸ್​ಎಸ್ ಹಿಡನ್ ಅಜೆಂಡಾ. ಹಸುವಿಗೆ ವಯಸ್ಸಾದ ಮೇಲೆ ಸಾಕಲು ರೈತರಿಗೆ ಕಷ್ಟಕರವಾಗುತ್ತದೆ. ಗೋಶಾಲೆ ಮಾಡಿದ್ರೆ ಶೇಕಡಾ 50 ರಷ್ಟು ಸಹಾಯಧನ ಸಿಗುತ್ತದೆ. ಆದರೆ, ಹಸುಗಳನ್ನ ಸಾಕುವ ರೈತನಿಗೆ ಸರ್ಕಾರ ಯಾವುದೇ ಸಹಾಯ ಧನ ನೀಡುತ್ತಿಲ್ಲ, ಗೋಹತ್ಯೆ ನಿಷೇಧ ಕಾಯ್ದೆ ರೈತನಿಗೆ ಶಾಪವಾಗಿದೆ ಎಂದರು.

ಕೃಷಿ ಕಾಯ್ದೆ ವಾಪಸ್ ಪಡೆಯಲು ಮೀನಮೇಷ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನ ವಾಪಸ್ ತೆಗೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರ ಈವರಗೆ ವಾಪಸ್ ಪಡೆದಿಲ್ಲ. ಈ ಮೊದಲು ಬೆಂಗಳೂರು ಅಧಿವೇಶನದಲ್ಲಿ ತೆಗೆಯುತ್ತೇವೆ ಎಂದರು. ಬಳಿಕ ಬೆಳಗಾವಿ ಅಧಿವೇಶನ ಅಂದರು, ಮತ್ತೆ ಬೆಂಗಳೂರು ಅಧಿವೇಶನದಲ್ಲಿ ತೆಗೆಯೋಣ ಅಂದರು. ಹೀಗೆ ಸಬೂಬು ಹೇಳಿಕೊಂಡು ಕೃಷಿ ಕಾಯ್ದೆಗಳನ್ನ ಸರ್ಕಾರ ಜಾರಿ ಮಾಡುತ್ತಿದೆ ಎಂದರು.

ದನ್ನೂ ಓದಿ:50 ವರ್ಷದಿಂದ ಇದೇ ರೀತಿ ಆಗುತ್ತಿದೆ.. ನಮ್ಮ ಕನ್ನಡ ಮಾತೆ ರಕ್ಷಣೆ ನಮಗೆ ಗೊತ್ತಿದೆ : ಸಚಿವ ಪ್ರಭು ಚೌಹಾಣ್

ಅಮುಲ್ ಜೊತೆ ಕೆಎಂಎಫ್ ವಿಲೀನ ಬೇಡ :ಗುಜರಾತ್ ಡೈರಿಯಾದ ಅಮುಲ್ ಜೊತೆಗೆ ಕೆಎಂಎಫ್ ವಿಲೀನ ಮಾಡುವುದು ಬೇಡವೇ ಬೇಡ. ರೈತರು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಂಡಿದ್ದಾರೆ. ಎಲ್ಲಾ ಸಂಸ್ಥೆಗಳು ಅದಾನಿ, ಅಂಬಾನಿಗೆ ಮಾರಾಟ ಮಾಡುತ್ತಿರುವ ಹಾಗೆಯೇ ಹೈನುಗಾರಿಕೆಯನ್ನು ಅದಾನಿ, ಅಂಬಾನಿಗೆ ನೀಡುವ ಕುತಂತ್ರ ಎಂದು ಆರೋಪಿಸಿದರು.

ಇದನ್ನೂ ಓದಿ:ಹಾಲು ಒಕ್ಕೂಟಗಳಲ್ಲಿ ದುಬಾರಿ ವೆಚ್ಚ, ಭ್ರಷ್ಟಾಚಾರ: ಕೋಡಿಹಳ್ಳಿ ಚಂದ್ರಶೇಖರ್‌ ಆರೋಪ

ABOUT THE AUTHOR

...view details