ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮಸ್ಥರು ಏರ್ಪೋರ್ಟ್ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಬೆಟ್ಟಕೋಟೆ ಗ್ರಾಮವು ಏರ್ಪೋರ್ಟ್ಗೆ ಇರುವ ಪರ್ಯಾಯ ಮಾರ್ಗ. ಕಳೆದ ಮೂರು ವರ್ಷಗಳಿಂದ ಕೆಐಎಎಲ್ 2ನೇ ರನ್ ವೇ ಕಾಮಗಾರಿ ಭರದಿಂದ ಸಾಗಿದ್ದು, ನಿತ್ಯ ಲೋಡ್ಗಟ್ಟಲೇ ಮಣ್ಣು, ಜಲ್ಲಿ ಮತ್ತು ಎಂಸ್ಯಾಂಡ್ಗಳನ್ನ ರನ್ ವೇ ಕಾಮಗಾರಿಗೆ ತಂದು ಸುರಿಯುತ್ತಿದ್ದಾರೆ. ಹೀಗಾಗಿ ನೂರಾರು ಲಾರಿಗಳ ಓಡಾಟ ಹಾಗೂ ಮಣ್ಣು ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ಐದಾರು ಹಳ್ಳಿಗಳಿಗೆ ವೇಗವಾಗಿ ಬೀಸುತ್ತಿರುವ ಗಾಳಿಯಲ್ಲಿ ವಿಪರೀತ ಧೂಳು ಬರುತ್ತಿದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿದೆ ಎಂದು ರೈತರು ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.