ಕರ್ನಾಟಕ

karnataka

ETV Bharat / state

ಅತ್ಯಾಚಾರ ಪ್ರಕರಣ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ - ಚಂದಾಪುರದ ವೃತ್ತದಲ್ಲಿ ಪ್ರತಿಭಟನೆ

ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಚಂದಾಪುರದ ವೃತ್ತದಲ್ಲಿ ಪ್ರತಿಭಟನೆ, Protest against rape case in Bangalore
ಚಂದಾಪುರದ ವೃತ್ತದಲ್ಲಿ ಪ್ರತಿಭಟನೆ

By

Published : Dec 6, 2019, 9:13 PM IST

ಬೆಂಗಳೂರು/ಆನೇಕಲ್:ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಮಹಿಳಾ ಸಂಘಟಕರು ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಚಂದಾಪುರದ ವೃತ್ತದಲ್ಲಿ ಪ್ರತಿಭಟನೆ

ತಮಿಳುನಾಡು, ತೆಲಂಗಾಣದ ಪಶುವೈದ್ಯೆ ಪ್ರಕರಣ ಸೇರಿದಂತೆ ಇಂದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೇಶ ತತ್ತರಿಸಿ ಹೋಗಿದೆ. ಕೇವಲ ಹೈದರಾಬಾದ್​ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆಯಾದರೆ ಸಾಲದು. ನಿರ್ಭಯಾ ಕೇಸ್​ನ ಅಪರಾಧಿಗಳಿಗೆ ಶಿಕ್ಷ ನೀಡಬೇಕು. ಅಲ್ಲದೇ ದೇಶದಲ್ಲಿ ಅತ್ಯಾಚಾರದಂತಹ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ABOUT THE AUTHOR

...view details