ಕರ್ನಾಟಕ

karnataka

ETV Bharat / state

ತಾಂತ್ರಿಕ ಸಮಸ್ಯೆಯಿಂದ ವಿಮಾನದಲ್ಲೇ 6 ತಾಸು ಕಳೆದ ಪ್ರಯಾಣಿಕರು: ಗೋ ಏರ್ ಏರ್​​ಲೈನ್ಸ್ ವಿರುದ್ಧ ಕಿಡಿ - ಥೈಲ್ಯಾಂಡ್​ನ ಪುಕೆಟ್

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಥೈಲ್ಯಾಂಡ್​ನ ಪುಕೆಟ್​ಗೆ ತೆರಳಿದ ವಿಮಾನ ತಾಂತ್ರಿಕ ಕಾರಣದಿಂದ ವಾಪಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಹೀಗಾಗಿ ವಿಮಾನದಲ್ಲೇ ಪ್ರಯಾಣಿಕರು ಆರು ತಾಸು ಕಳೆದಿದ್ದು, ಗೋ ಏರ್​ ಏರ್​ಲೈನ್ಸ್​​ ವಿರುದ್ಧ ಕಿಡಿಕಾರಿದ್ದಾರೆ.

protest-against-go-airline
ವಿಮಾನದಲ್ಲಿಯೇ 6 ತಾಸು ಕಳೆದ ಪ್ರಯಾಣಿಕರು

By

Published : Jan 24, 2020, 9:09 PM IST

ದೇವನಹಳ್ಳಿ:ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಥೈಲ್ಯಾಂಡ್​ನ ಪುಕೆಟ್​ಗೆ ತೆರಳಿದ್ದ ವಿಮಾನ ತಾಂತ್ರಿಕ ಕಾರಣದಿಂದ ವಾಪಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಗೋ ಏರ್ ಏರ್​​ಲೈನ್ಸ್ ಸಿಬ್ಬಂದಿ ತಾಂತ್ರಿಕ ಸಮಸ್ಯೆ ಬಗೆಹರಿಸಲು, ಮೂರು ತಾಸು ತೆಗೆದುಕೊಂಡಿದ್ದಾರೆ. ಕೊನೆಗೆ ವಿಮಾನ ಬೆಳಗ್ಗೆ ಟೆಕ್ ಆಫ್ ತೆಗೆದುಕೊಳ್ಳುವಾಗ ಮಂಜು ಕವಿದ ವಾತಾವರಣ ವಿಮಾನ ಹಾರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಪ್ರಯಾಣಿಕರು ಸತತ ಆರು ತಾಸು ವಿಮಾನದಲ್ಲಿಯೇ ಸಮಯ ಕಳೆಯುವಂತಾಗಿದೆ. ಗೋ ಏರ್ ಸಂಸ್ಥೆಯ ನಿರ್ಲಕ್ಷ್ಯತೆಗೆ ಬೇಸತ್ತ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ರು.

ವಿಮಾನದಲ್ಲಿಯೇ 6 ತಾಸು ಕಳೆದ ಪ್ರಯಾಣಿಕರು, ಗೋ ಏರ್​ ಏರ್​ಲೈನ್ಸ್​​ ವಿರುದ್ಧ ಗರಂ

ಕೆಐಎಎಲ್​​ನಿಂದ ಥೈಲ್ಯಾಂಡ್​​ನ ಪುಕೆಟ್​ಗೆ ಫ್ಲೈಟ್ ನಂಬರ್ G8041 ಟೆಕ್ ಆಫ್ ಆಗಿತ್ತು. ವಿಮಾನದಲ್ಲಿ 173 ಪ್ರಯಾಣಿಕರಿದ್ದರು. ಟೆಕ್​​ಆಪ್ ಆದ ವಿಮಾನ, ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ಕಾರಣದಿಂದ ಮಧ್ಯರಾತ್ರಿ 2.15 ಗಂಟೆಗೆ ವಾಪಸ್ ಕೆಐಎಎಲ್​ಗೆ ಬಂದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಸರಿಪಡಿಸಿದ ಸಿಬ್ಬಂದಿಗೆ ಮತ್ತೆ ಮಂಜು ಹಾರಾಟಕ್ಕೆ ತೊಂದರೆಯನ್ನುಂಟು ಮಾಡಿತು. ಇದರಿಂದ ಪುಕೆಟ್​​ನಲ್ಲಿ ಇಂದು ಬೆಳಗ್ಗೆ 7: 45ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ ಮಧ್ಯಾಹ್ನ 3 ಗಂಟೆಗೆ ಲ್ಯಾಂಡ್ ಆಗಬೇಕಾಯ್ತು.

ಬೆಳಗ್ಗೆ ಅವರಿಸಿದ್ದ ದಟ್ಟ ಮಂಜಿನಿಂದ 80 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಡಿಪಾರ್ಚರ್ ಆಗಬೇಕಿದ್ದ 60 ವಿಮಾನ ಮತ್ತು 17 ವಿಮಾನಗಳ ಆಗಮನ ಸಮಯದಲ್ಲಿ ವ್ಯತ್ಯಯವಾಗಿದೆ.

ABOUT THE AUTHOR

...view details