ನೆಲಮಂಗಲ :ಕೊರೊನಾ ಲಾಕ್ಡೌನ್ನಿಂದ ಕೆಲಸ ಕಳೆದೊಂದು ಕೃಷಿ ಮಾಡಲು ಮುಂದಾಗಿದ್ದ ಖಾಸಗಿ ಬಸ್ ಚಾಲಕನೋರ್ವ, ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೆಲಮಂಗಲ ತಾಲೂಕಿನ ಮೊದಲಕೋಟೆ ಗ್ರಾಮದ ಹನುಮಂತರಾಜು (35) ಮೃತ ದುರ್ದೈವಿ. ಖಾಸಗಿ ಬಸ್ ಚಾಲಕನಾಗಿದ್ದ ಹನುಮಂತರಾಜು, ಕೊರೊನಾ ಲಾಕ್ಡೌನ್ನಿಂದ ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದರು. ಲಾಕ್ಡೌನ್ ವೇಳೆ ಜೀವನ ನಿರ್ವಹಣೆಗೆ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದ ಅವರು, ವ್ಯವಸಾಯ ಮಾಡಲು ಸಹ ಸಾಲ ಮಾಡಿದ್ದರು.