ದೊಡ್ಡಬಳ್ಳಾಪುರ: ಅಗ್ನಿಕೊಂಡ ಹಾಯುವ ವೇಳೆ ಆಕಸ್ಮಿಕವಾಗಿ ಬಿದ್ದು ಅರ್ಚಕಿಯೋರ್ವರು ಗಾಯಗೊಂಡಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ರೇಣುಕಾ ಯಲ್ಲಮ್ಮ ದೇವಸ್ಥಾನದ ಅನು ಜೋಗತಿಯಮ್ಮ ಗಾಯಗೊಂಡವರು. ದೊಡ್ಡಬೆಳವಂಗಲದ ಶಾಂತಿನಗರದಲ್ಲಿರುವ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಸ್ಥಾನದದಲ್ಲಿ ಅಗ್ನಿಕೊಂಡ ಸೇವೆಯ ವೇಳೆ ಈ ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ದೇವಸ್ಥಾನದಲ್ಲಿ ಅಗ್ನಿಕೊಂಡ ಸೇವೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ: ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡ ಅರ್ಚಕಿ - ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡ ಅರ್ಚಕಿ
ಅಗ್ನಿಕೊಂಡ ಹಾಯುವ ವೇಳೆ ಆಕಸ್ಮಿಕವಾಗಿ ಬಿದ್ದ ಅರ್ಚಕಿ - ರೇಣುಕಾ ಯಲ್ಲಮ್ಮ ದೇವಸ್ಥಾನದ ಜೋಗತಿಯಮ್ಮಗೆ ಗಾಯ - ಗಾಯಾಳು ಆಸ್ಪತ್ರೆಗೆ ದಾಖಲು
ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡ ಅರ್ಚಕಿ
ಈ ವೇಳೆ ಕಳಶ ಹೊತ್ತಿದ್ದ ಅನು ಜೋಗತಿಯಮ್ಮ ಅಗ್ನಿಕೊಂಡ ಪ್ರವೇಶಿಸಿದರು. ಆಗ ಅವರು ಆಕಸ್ಮಿಕವಾಗಿ ಬಿದ್ದು, ಅಸ್ವಸ್ಥಗೊಂಡರು. ಕೂಡಲೇ ಅಲ್ಲಿದ್ದ ಭಕ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ:ಅಗ್ನಿಕೊಂಡ ಅವಘಡ : ಬೆಂಕಿಯಲ್ಲಿ ಬಿದ್ದ ಪೂಜಾರಿ