ಕರ್ನಾಟಕ

karnataka

ದೇವರ ಪೂಜಾ ಕಾರ್ಯದಲ್ಲಿ ತಾರತಮ್ಯ ಆರೋಪ.. ದೇವಾಲಯಕ್ಕೆ ಬೀಗ ಹಾಕಿದ್ದ ಅರ್ಚಕ ವಜಾ

By

Published : Feb 24, 2022, 3:44 PM IST

ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಯಲು ಬಸವಣ್ಣ ದೇವಸ್ಥಾನಕ್ಕೆ ಪೂಜೆ ಮಾಡಲು ಅರ್ಚಕರು ಇರಲಿಲ್ಲ, ದೇವಸ್ಥಾನದ ಸೇವಾ ಟ್ರಸ್ಟ್​​ನವರು 11 ವರ್ಷಗಳ ಹಿಂದೆ ಗೌರಿಬಿದನೂರು ಮೂಲದ ಹೆಚ್ ವಿ ಕೃಷ್ಣಮೂರ್ತಿಯನ್ನ ಅರ್ಚಕನನ್ನಾಗಿ ನೇಮಿಸಿದ್ದರು. ದಿನ ಕಳೆದಂತೆ ಅರ್ಚಕ ದೇವಸ್ಥಾನವನ್ನು ತನ್ನ ಸ್ವತ್ತು ಎಂಬಂತೆ ವರ್ತಿಸತೊಡಗಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು.

ದೇವಾಲಯಕ್ಕೆ ಬೀಗ ಹಾಕಿದ ಅರ್ಚಕ
ದೇವಾಲಯಕ್ಕೆ ಬೀಗ ಹಾಕಿದ ಅರ್ಚಕ

ದೊಡ್ಡಬಳ್ಳಾಪುರ :ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಆರೋಪ ಹಿನ್ನೆಲೆ ದೇವಸ್ಥಾನದ ಟ್ರಸ್ಟ್​​​ ನವರು ಅರ್ಚಕನನ್ನ ವಜಾ ಮಾಡಿದ್ದಾರೆ. ಇದಕ್ಕೂ ಮುನ್ನ ಅರ್ಚಕ ದೇವಾಲಯದ ಬಾಗಿಲಿಗೆ ಬೀಗ ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿರುವ ಘಟನೆ ನಗರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಸ್ಥಾದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ಅರ್ಚಕ ಹೆಚ್.ವಿ. ಕೃಷ್ಣಮೂರ್ತಿ ಬಾಗಿಲು ಹಾಕಿ ಎರಡು ದಿನದಿಂದ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದರು. ಅರ್ಚಕನ ವರ್ತನೆಯಿಂದ ಬೇಸತ್ತ ಭಕ್ತರು ಬೀಗ ರಿಪೇರಿ ಮಾಡುವನನ್ನ ಕರೆದು ದೇವಸ್ಥಾನದ ಬಾಗಿಲು ತೆರೆದು, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಐತಿಹಾಸಿಕ ಹಿನ್ನೆಲೆ ಬಯಲು ಬಸವಣ್ಣ ದೇವಸ್ಥಾನಕ್ಕೆ ಪೂಜೆ ಮಾಡಲು ಅರ್ಚಕರು ಇರಲಿಲ್ಲ, ಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್​ನವರು 11 ವರ್ಷಗಳ ಹಿಂದೆ ಗೌರಿಬಿದನೂರು ಮೂಲದ ಹೆಚ್ ವಿ ಕೃಷ್ಣಮೂರ್ತಿಯನ್ನ ಅರ್ಚಕನನ್ನಾಗಿ ನೇಮಿಸಿದ್ದರು. ದಿನ ಕಳೆದಂತೆ ಅರ್ಚಕ ದೇವಸ್ಥಾನವನ್ನು ತನ್ನ ಸ್ವತ್ತು ಎಂಬಂತೆ ವರ್ತಿಸತೊಡಗಿದ್ದನಂತೆ.

ದೇವಸ್ಥಾನಕ್ಕೆ ಬರುವ ಭಕ್ತರ ನಡುವೆ ತಾರತಮ್ಯ ಮಾಡುತ್ತಿದ್ದ. ಹಣ ಕೊಟ್ಟವರಿಗೆ ಪೂಜೆ, ಹಣ ಕೊಡದಿದ್ದವರಿಗೆ ಪೂಜೆ ಮಾಡಿ ಕೊಡುತ್ತಿರಲಿಲ್ಲ, ಕಾಣಿಕೆ ಹುಂಡಿ ಮೇಲೆ ಆರತಿ ತಟ್ಟೆ ಇಟ್ಟು ಭಕ್ತರು ಕಾಣಿಕೆ ಹಣವನ್ನ ತಾನೇ ಪಡೆಯುತ್ತಿದ್ದ. ಟ್ರಸ್ಟ್ ನವರ ಗಮನಕ್ಕೂ ತರದೆ ಮುಜರಾಯಿ ಇಲಾಖೆ ಅಧಿಕಾರಿಗಳನ್ನ ಕರೆದು ಹುಂಡಿ ಹಣ ಎಣಿಕೆ ಮಾಡಿದ್ದಾನೆಂದು ಟ್ರಸ್ಟ್​​ನ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಕೇಸರಿ ಶಾಲು-ಹಿಜಾಬ್ ತೆಗೆಸಿದಂತೆ ಟರ್ಬನ್ ತೆಗೆಯಲು ಸಾಧ್ಯವೇ? ಬೆಂಗಳೂರು ಕಾಲೇಜು ಆಡಳಿತ ಮಂಡಳಿ ಮನವಿ ಒಪ್ಪದ ವಿದ್ಯಾರ್ಥಿನಿ

ಅರ್ಚಕನ ವರ್ತನೆಯಿಂದ ಬೇಸತ್ತ ಟ್ರಸ್ಟ್ ನವರು ಸರ್ವಾನುಮತದಿಂದ ವಜಾ ಮಾಡಿದ್ದಾರೆ. ಬಯಲು ಬಸವಣ್ಣ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ವೆ ನಂಬರ್ 54ರಲ್ಲಿ 37 ಗುಂಟೆ ಜಮೀನು ಇದೆ. ಟ್ರಸ್ಟ್ ಅನ್ನು ಮುಜರಾಯಿ ಇಲಾಖೆಗೆ ಸೇರಿಸಿದರೆ, ಇಡೀ ದೇವಸ್ಥಾನ ತನಗೆ ಸಿಗುತ್ತೆ ಎಂಬ ಕಾರಣಕ್ಕೆ ಮುಜರಾಯಿ ಇಲಾಖೆಗೆ ದೂರು ನೀಡಿರುವ ಅರ್ಚಕ ಟ್ರಸ್ಟ್ ನವರು ದೇವಸ್ಥಾನದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಹಣ ದೋಚುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಮಳಿಗೆ ನಿರ್ಮಾಣ ಮಾಡಿಲ್ಲವೆಂದು ವರದಿ ನೀಡಿದ್ದಾರೆಂದು ಟ್ರಸ್ಟ್ ಸದಸ್ಯರು ಅರ್ಚಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details