ಕರ್ನಾಟಕ

karnataka

ETV Bharat / state

ಪಿಜಿ ಮಾಡುವುದಾಗಿ ಹೇಳಿ ಮದ್ಯದಂಗಡಿ ತೆರೆಯಲು ಸಿದ್ಧತೆ ಆರೋಪ: ಅಬಕಾರಿ ಕಚೇರಿ ಮುಂದೆ ಜನರ ಪ್ರತಿಭಟನೆ - ETV Bharat kannada News

ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯುವ ಆರೋಪ - ಸ್ಥಳೀಯರ ಆಕ್ಷೇಪ - ಅಬಕಾರಿ ಕಚೇರಿ ಮುಂದೆ ಪ್ರತಿಭಟನೆ

Protest in front of Excise office
ಅಬಕಾರಿ ಕಚೇರಿ ಮುಂದೆ ಜನರ ಪ್ರತಿಭಟನೆ

By

Published : Feb 7, 2023, 11:20 AM IST

Updated : Feb 7, 2023, 2:26 PM IST

ಬಾರ್ ತೆರೆಯದಂತೆ ಕ್ರಮ ಜರುಗಿಸಲು ಅಬಕಾರಿ ಅಧಿಕಾರಿಗಳಿಗೆ ಮನವಿ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) :ಜನ ವಸತಿ ಪ್ರದೇಶದಲ್ಲಿ ಕಟ್ಟಡ ಒಂದನ್ನು ಕಟ್ಟಲಾಗುತ್ತಿತ್ತು. ಪಿಜಿಗಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಲೀಕನ ಮಾತು ನಂಬಿ ಸ್ಥಳೀಯರು ಸಮ್ಮನಾಗಿದರು. ಆದರೆ ಪಿಜಿ ಬದಲಿಗೆ ಅಲ್ಲಿ ಬಾರ್ ಅನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಅಬಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಬಾರ್​ಗೆ ನೀಡಿರುವ ಅನುಮತಿಯನ್ನ ಹಿಂಪಡೆದುಕೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮಪಂಚಾಯಿತಿ ಮತ್ತು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಒಳಪಡುವ ಕರೇನಹಳ್ಳಿ 31ನೇ ವಾರ್ಡ್ ನ ಹೃದಯಭಾಗದಲ್ಲಿ ಮದ್ಯದ ಅಂಗಡಿ ತೆರೆಯಲು ತಯಾರಿ ನಡೆಸಲಾಗುತ್ತಿದೆ. ನರಸಿಂಹಮೂರ್ತಿ ಎಂಬ ವ್ಯಕ್ತಿ ಜನ ವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಸಿದ್ಧತೆಯನ್ನು ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದೇ ವೇಳೆ ಮಾತನಾಡಿದ ನಗರಸಭಾ ಸದಸ್ಯೆ ಪ್ರಭಾ ಅವರು, ಈ ಜನ ವಸತಿ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಬಾರ್ ತೆರೆಯುವುದರಿಂದ ಯುವ ಸಮೂಹ ಮತ್ತು ಶಾಲಾ ವಿದ್ಯಾರ್ಥಿಗಳು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಡುಕರ ಹಾವಳಿಯಿಂದ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಲು ಆಗದಂತ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬಹಳಷ್ಟು ಮಹಿಳೆಯರು ಕಾರ್ಖಾನೆಗೆ ಹೋಗುವವರಿದ್ದು, ರಾತ್ರಿ ವೇಳೆ ಮನೆಗೆ ಬರಲು ಭಯ ಪಡುತ್ತಾರೆ ಎಂದು ಅಲ್ಲಿ ಬಾರ್​ ತೆಗೆದರೆ ಎದುರಿಸುವ ಸಮಸ್ಯೆಗಳ ಬಗ್ಗೆ ಹೇಳಿದರು. ಬಳಿಕ ಆದಷ್ಟು ಬೇಗ ಈ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಎಂದು ಪ್ರಭಾ ಅವರು ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಇಲಾಖೆ ನಿರೀಕ್ಷಕರಾದ ಎಸ್.ಎಮ್ ಪಾಟೀಲ್, ಈಗಾಗಲೇ ನಗರದ ಕರೇನಹಳ್ಳಿಯಲ್ಲಿ ಬಾರ್ ತೆರೆಯುತ್ತಿರುವ ಬಗ್ಗೆ ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದೂ ಇವರ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು. ಬಳಿಕ ಮುಂದಿನ ನಿರ್ಧಾರ ಅವರೇ ತೆಗೆದುಕೊಳ್ಳುವರು ಎಂದರು.

ಅಬಕಾರಿ ನಿರೀಕ್ಷಕರ ಮಾತಿಗೆ ಒಪ್ಪದ ಸ್ಥಳೀಯರು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಬಾರ್ ತೆರೆಯಲು ಅನುಮತಿ ನೀಡಿದ್ದೇ ಆದಲ್ಲಿ ಇಂದು 400 ಜನ ಅಷ್ಟೇ ಬಂದಿರುವುದು, ಮುಂದಿನ ದಿನಗಳಲ್ಲಿ 4 ಸಾವಿರಕ್ಕಿಂತ ಹೆಚ್ಚು ಜನರು ಬಂದು ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ವೇಳೆ ಅರಳು ಮಲ್ಲಿಗೆ ಗ್ರಾಮ ಪಂಚಾಯತ್​ ಮಾಜಿ ಅಧ್ಯಕ್ಷ ಶಬೀರ್ ಪಾಷಾ, ಕಾಂಗ್ರೆಸ್ ಮುಖಂಡರಾದ ಬಷೀರ್, ನಗರ ಬ್ಲಾಕ್ ಅಧ್ಯಕ್ಷ ಜಗನ್ನಾಥ್, ಹೇಮಂತ್ ರಾಜ್ ಸೇರಿದಂತೆ ಇತತರು ಸೇರಿದ್ದರು.

ಇದನ್ನೂ ಓದಿ :ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದಲ್ಲಿ ಹಮಾಲಿಗಳ ಕೊರತೆ, ಖರೀದಿ ಪ್ರಕ್ರಿಯೆ ನಿಧಾನ ಆರೋಪ

Last Updated : Feb 7, 2023, 2:26 PM IST

ABOUT THE AUTHOR

...view details