ಕರ್ನಾಟಕ

karnataka

ETV Bharat / state

ರಾತ್ರಿಯಿಡೀ ಸುರಿದ ಮಳೆ: ದೇವನಹಳ್ಳಿಯಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ - ದೇವನಹಳ್ಳಿ ಮಳೆ ಲೇಟೆಸ್ಟ್​​ ನ್ಯೂಸ್​​

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಾದ್ಯಂತ ರಾತ್ರಿಯಿಡೀ ಮಳೆ ಸುರಿದಿದ್ದು, ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ.

ದೇವನಹಳ್ಳಿಯಾದ್ಯಂತ ಮಳೆ

By

Published : Oct 22, 2019, 9:52 AM IST

ಬೆಂಗಳೂರು:ಹವಾಮಾನ ಇಲಾಖೆ ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ಮಳೆ ಬರುವ ಮುನ್ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಾದ್ಯಂತ ರಾತ್ರಿಯಿಡೀ ವರುಣ ಅಬ್ಬರಿಸಿದ್ದಾನೆ.

ದೇವನಹಳ್ಳಿ ತಾಲೂಕಿನಾದ್ಯಂತ ಸುರಿದ ಮಳೆಯಿಂದ ಒಂದು ಕಡೆ ರಸ್ತೆಗಳಿಗೆ ಹಾಗೂ ರೈತರು ಜಮೀನಿಗೆ ನೀರು ನುಗ್ಗಿದ್ರೆ, ಮತ್ತೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನರು ರಾತ್ರಿಯೆಲ್ಲಾ ಕತ್ತಲಲ್ಲೇ ಕಾಲ ಕಳೆದಿದ್ದಾರೆ.

ದೇವನಹಳ್ಳಿ ತಾಲೂಕಿನಲ್ಲಿ ಭಾರಿ ಮಳೆ

ವಿಜಯಪುರ, ದೇವನಹಳ್ಳಿ ಪಟ್ಟಣಗಳ ರಾಜಕಾಲುವೆ ತುಂಬಿ ರಸ್ತೆಗಳ ಮೇಲೆ‌ ನೀರು ಹರಿದಿದೆ. ಕೆಲವೊಂದು ಕಡೆ ಮನೆಗಳಿಗೆ ನೀರು ನುಗ್ಗಿದ್ರೆ, ಮತ್ತೆ ಕೆಲವು ಕಡೆ ರಸ್ತೆಯ ಹಳ್ಳಕೊಳ್ಳಗಳಲ್ಲಿ‌ ನೀರು ನಿಂತುಕೊಂಡು ವಾಹನ ಸವಾರರಿಗೆ ಸಮಸ್ಯೆಯಾಗಿದೆ.

ABOUT THE AUTHOR

...view details