ನೆಲಮಂಗಲ: ಇನ್ಮುಂದೆ ಲಾಕ್ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇಷ್ಟು ದಿನ ಜಾಗೃತಿ ಆಯ್ತು ಇನ್ಮುಂದೆ ಲಾಠಿಗೆ ಕೆಲಸ: ಪೊಲೀಸರಿಂದ ಖಡಕ್ ಕ್ರಮದ ಎಚ್ಚರಿಕೆ - ಕೊರೊನಾ ಸುದ್ದಿ
ಇಲ್ಲಿಯವರೆಗೆ ಲಾಠಿ ಬದಿಗಿಟ್ಟು ಪೊಲೀಸರು ವಿಧ ವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆದ್ರೆ, ಜನರ ಓಡಾಟ ಮಾತ್ರ ನಿಂತಿರಲಿಲ್ಲ. ಹಾಗಾಗಿ ಇನ್ಮುಂದೆ ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪೊಲೀಸರಿಂದ ಖಡಕ್ ಎಚ್ಚರಿಕೆ
ಡಿವೈಎಸ್ ಪಿ.ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಇಸ್ಲಾಂಪುರ ಹಾಗೂ ನೆಲಮಂಗಲ ಪಟ್ಟಣದಲ್ಲಿ ಪಥಸಂಚಲನ ನಡೆಸಿದ ಪೊಲೀಸರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಇನ್ಮುಂದೆ ಅನವಶ್ಯಕವಾಗಿ ಓಡಾಡಿದರೆ ಬಿಸಿ ಮುಟ್ಟಿಸುವುದಾಗಿ ತಿಳಿಸಿದ್ದಾರೆ.
ಮನೆಯಿಂದ ಹೊರಗಡೆ ಬರಬೇಡಿ ಎಂದು ಇಷ್ಟು ದಿನ ಮನವಿ ಮಾಡಿದ್ದೇವೆ. ಇನ್ಮುಂದೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.