ನೆಲಮಂಗಲ: ಅನಾರೋಗ್ಯದ ಹಿನ್ನೆಲೆ ಹಣಕಾಸಿನ ಸಮಸ್ಯೆಯಿಂದ ಮನೆಯಲ್ಲಿ ಸಾಕಿದ್ದ ನಾಯಿಮರಿಯನ್ನ ಮಾರಲು ಹೋದ ಬಾಲಕನನ್ನ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿದ್ದಾರೆ.
ನಾಯಿಮರಿ ಮಾರಲು ಹೋಗಿ ಅಪಹರಣವಾಗಿದ್ದ ಬಾಲಕನನ್ನು ರಕ್ಷಿಸಿದ ಪೊಲೀಸರು - ಮಾದನಾಯಕನಹಳ್ಳಿ ಪೊಲೀಸ್ ಠಾಣೆ
ಬೆಂಗಳೂರು ಉತ್ತರ ತಾಲೂಕು ಅಂದ್ರಹಳ್ಳಿ ಮುಖ್ಯರಸ್ತೆ ವಿನಾಯಕ ಲೇಔಟ್ ನಿವಾಸಿಗಳಾದ ರೇಣುಕಾ ಮತ್ತು ನಾಗರಾಜ್ ಎಂಬುವರ ಮಗ 13 ವರ್ಷದ ನಿತಿನ್ ಎಂಬ ಬಾಲಕ ನಾಯಿ ಮರಿ ಮಾರಲು ಹೋದಾಗ ಈತನನ್ನು ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಅಂದ್ರಹಳ್ಳಿ ಮುಖ್ಯರಸ್ತೆ ವಿನಾಯಕ ಲೇಔಟ್ ನಿವಾಸಿಗಳಾದ ರೇಣುಕಾ ಮತ್ತು ನಾಗರಾಜ್ ಎಂಬುವರ ಮಗ 13 ವರ್ಷದ ನಿತಿನ್ ಎಂಬ ಬಾಲಕ ನಾಯಿಮರಿ ಸಾಕಿಕೊಂಡಿದ್ದ. ಸ್ನೇಹಿತರೊಬ್ಬರ ಸಲಹೆಯಂತೆ ನಾಯಿ ಮಾರಿದ ಹಣದಲ್ಲಿ ಚಿಕಿತ್ಸೆ ಕೊಡಿಸಲು ನಿತಿನ್ ತಾಯಿ ರೇಣುಕಾ ತೀರ್ಮಾನಿಸಿದ್ದರು. ನಾಯಿ ಮರಿ ಕೊಂಡುಕೊಳ್ಳುವುದಾಗಿ ಪರಿಚಯಸ್ಥರಿಂದ ಫೋನ್ ಕರೆ ಬಂದಾಗ ನಾಯಿಮರಿ ತೋರಿಸಲೆಂದು ಜುಲೈ 27ರಂದು ನಿತಿನ್ ತೆರಳಿದ್ದ. ಈ ವೇಳೆ ಆತನನ್ನು ಅಪಹರಿಸಿದ್ದ ಆರೋಪಿಗಳು ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದೇವೆ. ಅವನು ಬೇಕಾದ್ರೆ ₹20 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ರು.
ಗಾಬರಿಗೊಂಡ ನಿತಿನ್ ಪೋಷಕರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ರು. ನಾಯಿಮರಿ ಕೊಂಡುಕೊಳ್ಳುವ ನೆಪದಲ್ಲಿ ಬಂದಿದ್ದ ಅಪಹರಣಕಾರರು ನಿತಿನ್ನನ್ನು ಹುಂಡೈ ಕ್ರೆಟಾ ಕಾರಿನಲ್ಲಿ ಅಪಹರಿಸಿದ್ರು. ಅಪಹರಣಕಾರರ ಬೆನ್ನತ್ತಿದ ಪೊಲೀಸರು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಮುಂಜಾನೆ 5 ಗಂಟೆ ಸಮಯದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರೀಸಾವೆ ಬಳಿ ಅಪಹರಣಕಾರರನ್ನು ಬಂಧಿಸಿ ಬಾಲಕನನ್ನ ರಕ್ಷಿಸಿದ್ದಾರೆ. ಅಂದ್ರಹಳ್ಳಿ ನಿವಾಸಿಗಳಾದ ಮನು(24), ದರ್ಶನ್(20), ಆದರ್ಶ(20) ಲೋಕೇಶ್(20) ಹಾಗೂ ಆಕಾಶ್(20) ಅರೆಸ್ಟಾಗಿದ್ದಾರೆ.