ಹೊಸಕೋಟೆ:ಅನಗತ್ಯವಾಗಿ ತಿರುಗುವ ವಾಹನ ಸವಾರರಿಗೆ ಬಸ್ಕಿ ಹೊಡೆಸಿ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಇದೆ, ಬರಬೇಡಿ ಅಂದ್ರು ಬಂದ್ರು... ಬಸ್ಕಿ ಹೊಡೆದು ಸುಸ್ತಾದ್ರು! - ಕಪ್ಪೆ ಓಟದ ಶಿಕ್ಷೆ
ಕೊರೊನಾ ಕರ್ಫ್ಯೂ ಇದ್ದರೂ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಹೊಸಕೋಟೆಯಲ್ಲಿ ಬಸ್ಕಿ ಹೊಡೆಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
corona punishment
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ನೀಡಿ ಸಮಯ ನಿಗದಿಗೊಳಿಸಲಾಗಿದೆ. ಆದ್ರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದು, ಅಂತವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕೆಲವರಿಗೆ ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಲಾಗಿದೆ.
ಸಿಪಿಐ ರಂಗಸ್ವಾಮಿ, ಪಿಎಸ್ಐ ಪ್ರದೀಪ್ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 35 ಬೈಕ್ ಹಾಗೂ ಇನ್ನಿತರೆ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಯಿತು. (ಅನಗತ್ಯ ಸಂಚಾರ.. ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಚನ್ನಗಿರಿಯಲ್ಲಿ ಕಪ್ಪೆ ಓಟ - ವಿಡಿಯೋ )