ಕರ್ನಾಟಕ

karnataka

ETV Bharat / state

ರಾಷ್ಟ್ರಗೀತೆ ಹಾಡಿ ಬಿಹಾರಿಗಳನ್ನು ಸಮಾಧಾನಪಡಿಸಿದ ಪೊಲೀಸ್​ ಇನ್ಸ್​ಪೆಕ್ಟರ್​; ವಿಡಿಯೋ ವೈರಲ್ - ನೆಲಮಂಗಲ

ತಾಯ್ನಾಡಿಗೆ ಹೋಗಲು ಬಿಹಾರಿ ಕಾರ್ಮಿಕರು ಟ್ರೈನ್ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರವನ್ನ ಒತ್ತಾಯಿಸುವ ವೇಳೆ ಕಾರ್ಮಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ರಾಷ್ಟ್ರಗೀತೆ ಹಾಡಿದ್ದಾರೆ.

Police inspector
ಪೊಲೀಸ್ ಇನ್ಸ್ ಪೆಕ್ಟರ್ ಸತ್ಯನಾರಾಯಣ

By

Published : May 7, 2020, 11:48 AM IST

ನೆಲಮಂಗಲ: ಊರಿಗೆ ಕಳುಹಿಸಲು ಟ್ರೈನ್ ವ್ಯವಸ್ಥೆ ಮಾಡುವಂತೆ ಬಿಹಾರಿ ಕಾರ್ಮಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಸಂದರ್ಭ ಪರಿಸ್ಥಿತಿ ಕೈಮೀರುತ್ತಿದಂತೆ ರಾಷ್ಟ್ರ ಗೀತೆಯನ್ನು ಹಾಡಿ ಮಾದನಾಯಕನಹಳ್ಳಿ ಇನ್ಸ್​ಪೆಕ್ಟರ್ ಕಾರ್ಮಿಕರನ್ನು ಸಮಾಧಾನಪಡಿಸಿದ ಘಟನೆ ನಡೆದಿದೆ.

ರಾಷ್ಟ್ರಗೀತೆ ಹಾಡಿ ಬಿಹಾರಿಗಳನ್ನು ಸಮಾಧಾನಪಡಿಸುತ್ತಿರುವ ಪೊಲೀಸರು

ತಾಯ್ನಾಡಿಗೆ ಹೋಗಲು ಬಿಹಾರಿ ಕಾರ್ಮಿಕರು ಟ್ರೈನ್ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರವನ್ನ ಒತ್ತಾಯಿಸುವ ವೇಳೆ ಕಾರ್ಮಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ರಾಷ್ಟ್ರಗೀತೆ ಹಾಡಿದ್ದಾರೆ.

ಹೊರ ರಾಜ್ಯದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಕರ್ನಾಟಕದಲ್ಲಿ ಬಿಹಾರಿ ಕಾರ್ಮಿಕರು ತಾಯ್ನಾಡಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ.

ಬೆಂಗಳೂರು ಹೊರವಲಯದ ಬೆಂಗಳೂರು ಉತ್ತರ ತಾಲೂಕಿನ ಮಾದವರದ ಬಳಿ ಊರಿಗೆ ಕಳಿಸಲು ಟ್ರೈನ್ ವ್ಯವಸ್ಥೆ ಮಾಡದ ಸರ್ಕಾರದ ವಿರುದ್ಧ 4 ಸಾವಿರ ಬಿಹಾರಿ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸಿದರು. ಆಕ್ರೋಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭ ಬೆಂಗಳೂರಿನ ಪೀಣ್ಯ ಇನ್ಸ್‌ಪೆಕ್ಟರ್ ಮುದ್ದುರಾಜ್ ತಲೆಗೆ ಕಲ್ಲೆಸೆದು ಗಾಯಗೊಳಿಸಿದರು. ಈ ಸಮಯದಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸ್​​​​​ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಮಿಕರನ್ನ ಸಮಾಧಾನ ನಡೆಸಲು ಯತ್ನಸಿದ್ದಾರೆ.

ರಸ್ತೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದಂಗೆ ಬಿಹಾರಿ ವಲಸೆ ಕಾರ್ಮಿಕರು ಸಹ ರಾಷ್ಟ್ರ ಗೀತೆ ಹಾಡಿದ್ದಾರೆ ಬಳಿಕ ಕಾರ್ಮಿಕ ಕೋಪ ಶಮನವಾಗಿ ಆಗುತ್ತಿದ್ದ ಭಾರಿ ಅನಾಹುತ ತಪ್ಪಿದೆ. ಸಮಯಪ್ರಜ್ಞೆ ಮೂಲಕ ಕಾರ್ಮಿಕರನ್ನ ಸಮಧಾನಪಡಿಸಿದ ಮಾದನಾಯಕನಹಳ್ಳಿ ಠಾಣೆ ಇನ್ಸ್‌ಪೆಕ್ಟರ್​ ಸತ್ಯನಾರಾಯಣಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮೂರು ದಿನದ ಹಿಂದೆ ನಡೆದ ರಾಷ್ಟ್ರಗೀತೆ ಹಾಡಿದ ವಿಡಿಯೋ ಈಗ ವೈರಲ್ ಆಗಿದೆ.

ABOUT THE AUTHOR

...view details