ಕರ್ನಾಟಕ

karnataka

ETV Bharat / state

ಚೆಕ್​​ಪೋಸ್ಟ್​​​ನಲ್ಲಿ ಹೂಗುಚ್ಛ ನೀಡಿ ಟ್ರಕ್ ಚಾಲಕರಿಗೆ ಧೈರ್ಯ ತುಂಬಿದ ರವಿ ಡಿ. ಚನ್ನಣ್ಣನವರ್.. - ಚೆಕ್​​ಪೋಸ್ಟ್​​​ನಲ್ಲಿ ಹೂಗುಚ್ಛ ನೀಡಿದ ರವಿ ಡಿ. ಚನ್ನಣ್ಣನವರ್

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ವೆಂಕಟಗಿರಿಕೋಟೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಎಸ್ ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್ ಅಗತ್ಯ ವಸ್ತುಗಳನ್ನ ಸಾಗಿಸುವ ಟ್ರಕ್ ಮತ್ತು ಗೂಡ್ಸ್ ಚಾಲಕರಿಗೆ ಹೂ ಮತ್ತು ಹಣ್ಣುಗಳನ್ನ ನೀಡಿ ಶುಭ ಕೋರಿದರು.

police giving  flower boque to truck drivers
ವಾಹನ ಚಾಲಕರಿಗೆ ಹೂ ಗುಚ್ಛ

By

Published : Apr 5, 2020, 12:48 PM IST

ದೇವನಹಳ್ಳಿ:ಬೆಂಗಳೂರು ಮಹಾನಗರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ಚಾಲಕರಿಗೆ ಹೂ ಗುಚ್ಛ ನೀಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ ಎಸ್, ರವೀಂದ್ರ , ಎಸ್ಪಿ ರವಿ ಡಿ. ಚನ್ನಣ್ಣನವರ್ ಧೈರ್ಯ ತುಂಬಿದ್ದಾರೆ.

ಹೂಗುಚ್ಛ ನೀಡಿಲಾರಿ ಚಾಲಕರ ಆತ್ಮಬಲ ಹೆಚ್ಚಿಸಿದ ಡಿಸಿ,ಎಸ್‌ಪಿ..
ಕೊರೊನಾ ವೈರಸ್ ತಡೆಗಟ್ಟಲು ಲಾಕ್​​ಡೌನ್ ಜಾರಿಯಾದ ಹಿನ್ನೆಲೆ ದೇಶದ್ಯಾಂತ ಚೆಕ್‌ಪೋಸ್ಟ್ ಮಾಡಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಇತ್ತ ದೇವನಹಳ್ಳಿ ಸುತ್ತಮುತ್ತಲಿನ ಚೆಕ್‌ಪೋಸ್ಟ್‌ಗಳಿಗೆ ಡಿಸಿ ರವೀಂದ್ರ ಮತ್ತು ಎಸ್ಪಿ ರವಿ ಡಿ ಚನ್ನಣ್ಣನವರ್ ದಿಢೀರ್ ಭೇಟಿ ನೀಡುವ ಮೂಲಕ ಟ್ರಕ್ ಚಾಲಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ವೆಂಕಟಗಿರಿಕೋಟೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಎಸ್ ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್ ಅಗತ್ಯ ವಸ್ತುಗಳನ್ನ ಸಾಗಿಸುವ ಟ್ರಕ್ ಮತ್ತು ಗೂಡ್ಸ್ ಚಾಲಕರಿಗೆ ಹೂ ಮತ್ತು ಹಣ್ಣುಗಳನ್ನ ನೀಡಿ ಶುಭ ಕೋರಿದರು. ಅಗತ್ಯ ವಸ್ತುಗಳ ಪೂರೈಸುವ ಚಾಲಕರಿಗೆ ಪೊಲೀಸ್ ಮತ್ತು ಅಧಿಕಾರಿ ವರ್ಗ ಜೊತೆಗಿರುವುದಾಗಿ ಆತ್ಮಸ್ಥೈರ್ಯ ತುಂಬಿದರು.

ABOUT THE AUTHOR

...view details