ಹೊಸಕೋಟೆ:ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ದಿನಸಿ, ತರಕಾರಿ ಹಾಗೂ ಹಾಲು ವಿತರಣೆ ಮಾಡಿ ನಂದಗುಡಿ ಪೊಲೀಸರು ಮಾನವೀಯತೆ ತೋರುತ್ತಿದ್ದಾರೆ.
ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿದೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ವಲಸಿಗೆ ಕಾರ್ಮಿಕರಿಗೆ ಅಗತ್ಯ ಸಾಮಗ್ರಿ ಖರೀದಿಸಲು ಹಣವಿಲ್ಲ. ನಿತ್ಯದ ಹೊಟ್ಟೆ ಹೊರಲು ಹೆಣಗಾಡುತ್ತಿರುವ ಬಡವರಿಗೆ ನಂದಗುಡಿ ಪೊಲೀಸ್ ಠಾಣೆ ಸಿಬ್ಬಂದಿ ದಿನಸಿ ಸಾಮಗ್ರಿ, ತರಕಾರಿ ಹಾಗೂ ಹಾಲು ವಿತರಣೆ ಮಾಡುತ್ತಿದ್ದಾರೆ.
ಲಾಠಿ ಹಿಡಿವ ಕೈಯಲ್ಲಿ ಹಸಿದವರಿಗೆ ಅನ್ನ ವಿತರಣೆ ಪ್ರತಿನಿತ್ಯ 50 ಕುಟುಂಬಗಳಿಗೆ ಕಳೆದು 3 ದಿನಗಳ ಅಗತ್ಯ ವಸ್ತುಗಳನ್ನು ವಿತರಿಸಿಕೊಂಡು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ಧಪಡಿಸಿದ ಆಹಾರ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಸಿಬ್ಬಂದಿ ತೀರ್ಮಾನ ಮಾಡಿದ್ದಾರೆ.
ಹೋರ ರಾಜ್ಯಗಳಿಂದ ಬಂದು ಶೆಡ್ ಹಾಕಿಕೊಂಡು ಕಟ್ಟಡ ನಿರ್ಮಾಣ ಮತ್ತು ತೋಟಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರನ್ನು ಗುರುತಿಸಿ ದಿನಸಿ ವಿತರಣೆ ಮಾಡುತ್ತಿದ್ದಾರೆ. ಲಾಠಿ ಹಿಡಿಯುವ ಕೈಯಲ್ಲಿ ದಿನಸಿ ಸಾಮಗ್ರಿ ಹಿಡಿದ ಪೊಲೀಸರು, ಹಸಿದವರ ಪಾಲಿನ ಆಪತ್ಭಾಂದವರಾಗಿದ್ದಾರೆ.