ಆನೇಕಲ್ (ಬೆಂ.ಗ್ರಾ):ನಿಷೇಧಿತ ಇ ಸಿಗರೇಟ್ ಅಕ್ರಮ ಮಾರಾಟ ಪತ್ತೆಯಾಗಿದ್ದು, ಸರ್ಜಾಪುರ ಪೊಲೀಸರು ಇಬ್ಬರು ಆರೋಪಿಗಳ ವಶಕ್ಕೆ ಪಡೆದಿದ್ದಾರೆ. ದೊಮ್ಮಸಂದ್ರ ಟ್ವಿಂಕಲ್ ಫ್ಯಾನ್ಸಿ ಸ್ಟೋರ್ನಲ್ಲಿ ಸಿಗರೇಟ್ ಮಾರಾಟವಾಗುತ್ತಿತ್ತು.
ನಿಷೇಧಿತ ಇ ಸಿಗರೇಟ್ ಮಾರಾಟ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು - ಸರ್ಜಾಪುರ ಪೊಲೀಸ್
ನಿಷೇಧಿತ ಇ ಸಿಗರೇಟ್ ಅಕ್ರಮ ಮಾರಾಟ ಮಾಡುತ್ತಿದ್ದ ಅಬೂಬಕ್ಕರ್ ಹಾಗೂ ಅಸೈನರ್ ಎಂಬವವರನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
e-cigaratte
ಮಂಗಳೂರು ಮೂಲದ ಅಬೂಬಕ್ಕರ್ ಹಾಗು ಅಸೈನರ್ ಬಂಧಿತ ಆರೋಪಿಗಳಾಗಿದ್ದಾರೆ. ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ನಿಷೇಧಿತ 12 ಇ ಸಿಗರೇಟ್ ವಶಕ್ಕೆ ಪಡೆಯಲಾಗಿದ್ದು, ಎಲೆಕ್ಟ್ರಾನಿಕ್ಸ್ ಸಿಗರೇಟ್ ಪ್ರೋಹಿಬಿಷನ್ ಅಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಯುತ್ತಿದೆ.