ಕರ್ನಾಟಕ

karnataka

ETV Bharat / state

ನಕಲಿ ಮಾಲೀಕ, ದಾಖಲೆ ಸೃಷ್ಠಿಸಿ ಜಮೀನು ಮಾರೋ ವಂಚಕರು ಪೊಲೀಸ್​ ಬಲೆಗೆ - ದೊಡ್ಡಬಳ್ಳಾಪುರ ನಕಲಿ ಜಮೀನುದಾರರು

ನಕಲಿ ದಾಖಲೆ ಸೃಷ್ಠಿಸಿ ಜಮೀನು ಮಾರಾಟ ಮಾಡುತ್ತಿದ್ದ ವಂಚಕರ ತಂಡವನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

Police arrested Fraudulent land owners who were selling land illegally
ನಕಲಿ ಮಾಲೀಕನನ್ನ ಸೃಷ್ಟಿಸಿ ಜಮೀನು ಮಾರಾಟ ಮಾಡುತ್ತಿದ್ದ ವಂಚಕರು ಪೊಲೀಸರ ವಶ

By

Published : Dec 12, 2019, 11:56 PM IST

ದೊಡ್ಡಬಳ್ಳಾಪುರ:ಜಮೀನು ಮಾಲೀಕನ ಮಗನಾಗಿ ನಟಿಸುವ ಮೂಲಕ ಜಮೀನು ಮಾರಾಟ ನಡೆಸಿದ ವಂಚಕರ ತಂಡವನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ್ ಗೇಟ್ ಬಳಿಯ ಸರ್ವೆ ನಂಬರ್ 142/5 ರ 3 ಎಕರೆ 24 ಗುಂಟೆ ಜಮೀನು ಬೆಂಗಳೂರಿನ ತಿಂಡ್ಲು ಗ್ರಾಮದ ರುದ್ರೇಗೌಡರಿಗೆ ಸೇರಿದ್ದು. ಈ ಜಮೀನನ್ನು ರುದ್ರೇಗೌಡರಿಗೇ ತಿಳಿಯದಂತೆ ಅವರಿಗೊಬ್ಬ ಮಗನನ್ನು, ನಕಲಿ ದಾಖಲೆಗಳನ್ನು ಸೃಷ್ಠಿಸಿ, ಬೆಂಗಳೂರಿನ ಕೊದಂಡರಾಮಯ್ಯ ಎಂಬುವರಿಗೆ ಮಾರುವುದರ ಮೂಲಕ ವಂಚನೆ ಮಾಡಿದ್ದರು. ಇನ್ನೂ ತಮಗೆ ಗೊತ್ತಿಲ್ಲದೇ ಜಮೀನು ಮಾರಾಟವಾಗಿರುವ ಬಗ್ಗೆ ರುದ್ರೇಗೌಡರ ಪತ್ನಿ ವಾಣಿ ಎಂಬುವರು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.

ಸದ್ಯ ಭೂ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುತ್ತಹಳ್ಳಿಯ ಚಂದ್ರಪ್ಪ (48), ಗಡಂ ಬಚ್ಚಹಳ್ಳಿಯ ಚನ್ನಕೇಶವ (36) ಮಾದಪುರದ ಶಿವಣ್ಣ (48) ಗೂಳ್ಯ ಗ್ರಾಮದ ಮಂಜುನಾಥ್ (35) ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details