ಕರ್ನಾಟಕ

karnataka

ETV Bharat / state

ಒಂಟಿ ಬೈಕ್​ಗಳನ್ನೇ​​ ಟಾರ್ಗೆಟ್​ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್... ಫೋನ್​ ಬಿಟ್ಟೋಗಿ ತಗಲಾಕ್ಕೊಂಡ್ರು ಖದೀಮರು  ​

ಮಧ್ಯೆ ರಾತ್ರಿ ಓಡಾಡುವ ಬೈಕ್​ಗಳು, ಒಂಟಿಯಾಗಿ ಸಿಗುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್​ನ್ನು ಚನ್ನರಾಯಪಟ್ಟಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ​.

By

Published : Jun 26, 2019, 1:05 PM IST

ದೇವನಹಳ್ಳಿ

ದೇವನಹಳ್ಳಿ:ಮಧ್ಯೆ ರಾತ್ರಿ ಒಂಟಿಯಾಗಿ ಓಡಾಡುವ ಬೈಕ್​ಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಲಾಂಗ್​ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್​​ ಕಳ್ಳರ ಗ್ಯಾಂಗ್​ ಈಗ ಕಂಬಿ ಎಣಿಸುವಂತಾಗಿದೆ. ಖದೀಮರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂದೀಪ್ ರೆಡ್ಡಿ ಆಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ್​, ರಜನಿಕಾಂತ್, ಸೀನ, ಪ್ರದೀಪ್ ಹಾಗೂ ಓರ್ವ ಬಾಲಕ ಈ ಬಂಧಿತ ಗ್ಯಾಂಗ್​ನಲ್ಲಿದ್ದಾನೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದವರಾಗಿದ್ದಾರೆ. ಇವರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್‌ ಸವಾರರು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.

ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಚನ್ನರಾಯಪಟ್ಟಣ ಪೊಲೀಸರು

ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಲಾಂಗ್ ತೋರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು 7 ಮಂದಿ ದರೋಡೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ.

ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಪೊಲೀಸರು

ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಖದೀಮರನ್ನು ಬಂಧಿಸುವುದಕ್ಕಾಗಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಖದೀಮರಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ ಕಾಯುತ್ತಿದ್ದರು. ಕಗ್ಗಲಹಳ್ಳಿಯಿಂದ ದರೋಡೆ ಮಾಡಿ ಬರುತ್ತಿದ್ದ ಅನುಮಾನಾಸ್ಪದ ಕಾರೊಂದನ್ನು ನಮ್ಮ ಸಿಬ್ಬಂದಿ ಚೇಸ್ ಮಾಡಿದ್ದರು. ಈ ವೇಳೆ ಕಾರಿನಲ್ಲಿದ್ದ ಆರೋಪಿಗಳು ನಮ್ಮ ಜೀಪ್​ಗೆ ಗುದ್ದಿ ಕಾರು, ಮೊಬೈಲ್‌ಗಳನ್ನು ಅಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದರು.

ಪೊಲೀಸ್ ಜೀಪ್​ ಚಾಲಕ ಕಳ್ಳನೋರ್ವನನ್ನು ಚೇಸ್ ಮಾಡಿ ಹಿಡಿದಿದ್ದು, ದರೋಡೆಕೋರರು ಬಳಸುತ್ತಿದ್ದ ಫೋನ್‌ಗಳ ಆಧಾರದಲ್ಲಿ ಆರೋಪಿಗಳ ಗ್ಯಾಂಗ್​ನ್ನು ಬಂಧಿಸಲಾಗಿದೆ. ಈ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಗ್ಯಾಂಗ್ ಲೀಡರ್ ಸಂದೀಪ್‌ ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳಿವೆ.

ಬಂಧಿತರಿಂದ 8 ಲಕ್ಷ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‌ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ದೊಡ್ಡಬಳ್ಳಾಪುರ ಡಿವೈಎಸ್‌ಪಿ ಮೋಹನ್‌ ಕುಮಾರ್ ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details