ಕರ್ನಾಟಕ

karnataka

ETV Bharat / state

ಪಿಎಲ್​ಡಿ ರೈತರ 4.5 ಕೋಟಿ ರೂ. ಬಡ್ಡಿ ಮನ್ನಾ: ಬ್ಯಾಂಕ್​ ಅಧ್ಯಕ್ಷ - ಪಿಎಲ್​ಡಿ ಬ್ಯಾಂಕ್​ ಬಡ್ಡಿ ಮನ್ನಾ

ದೊಡ್ಡಬಳ್ಳಾಪುರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ನಲ್ಲಿ 10.20 ಕೋಟಿ ರೂ ಸಾಲ ಮರು ಪಾವತಿಯಾಗಬೇಕಿದೆ. 4.5 ಕೋಟಿ ರೂ. ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ ಎಂದು ಬ್ಯಾಂಕ್​ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ ಹೇಳಿದರು.

pl-d-bank-loan-interest-waiver
ಪಿಎಲ್​ಡಿ ರೈತರ ₹4.5 ಕೋಟಿ ಬಡ್ಡಿ ಮನ್ನಾ

By

Published : Mar 5, 2020, 5:40 AM IST

ದೊಡ್ಡಬಳ್ಳಾಪುರ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ನಿಂದ ಸಾಲ ಪಡೆದ ರೈತರು ಮಾರ್ಚ್ 31ರೊಳಗೆ ಅಸಲು ಪಾವತಿಸಿದರೆ, ಸಂಪೂರ್ಣವಾಗಿ ಬಡ್ಡಿಯನ್ನುಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಬ್ಯಾಂಕ್​ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ ಹೇಳಿದರು.

ಪಿಎಲ್​ಡಿ ಬ್ಯಾಂಕ್​ನಲ್ಲಿ ಸಾಲ ಪಡೆದ ರೈತರ 4.5 ಕೋಟಿ ರೂ. ಬಡ್ಡಿ ಮನ್ನಾ

ಸರ್ಕಾರದ ಆದೇಶದ ಅನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳ ಮೂಲಕ ಸುಸ್ತಿಯಾಗಿರುವ ಸಾಲದ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಕ್ರಮದಿಂದ ಬ್ಯಾಂಕ್​ಗೆ ಜೀವ ಬಂದಿದೆ. ಇದರಿಂದ ಮತ್ತಷ್ಟು ರೈತರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಿದೆ. ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ನಲ್ಲಿ 10.20 ಕೋಟಿ ರೂ ಸಾಲ ಮರು ಪಾವತಿಯಾಗಬೇಕಿದೆ. 4.5 ಕೋಟಿ ರೂ. ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ ಎಂದರು.

ABOUT THE AUTHOR

...view details