ದೇವನಹಳ್ಳಿ: ವಿಶ್ವದ ಅತಿದೊಡ್ಡ ಏರ್ ಬಸ್ A380 ವಿಮಾನ ಆಕ್ಟೋಬರ್ 14 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಕನ್ನಡಿಗರೊಬ್ಬರು ವಿಮಾನದ ಪೈಲಟ್ ಆಗಿದ್ದು, ಪ್ರಯಾಣಿಕರನ್ನ ಕನ್ನಡದಲ್ಲೇ ಸ್ವಾಗತಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪೈಲಟ್ ಆಗಿರುವ ಹೆಮ್ಮೆಯ ಕನ್ನಡಿಗ ಸಂದೀಪ್ ಪ್ರಭು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಮೂಲತಃ ಮಂಗಳೂರು/ಬೆಂಗಳೂರಿನವರಾಗಿರುವ ಅವರು ವಿಮಾನ ಪ್ರಯಾಣಿಕರನ್ನು ಸ್ವಾಗತಿಸುವ ವೇಳೆ ಕನ್ನಡದಲ್ಲಿ ಉದ್ಘೋಷ (ಅನೌನ್ಸ್ ಮೆಂಟ್) ಮಾಡಿರುವುದು ಅಕ್ಷರಶಃ ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. ಇದು ನಿಜವಾದ ಕನ್ನಡದ ಪ್ರೀತಿ, ಸಂದೀಪ್ ಪ್ರಭು ಕನ್ನಡಿಗರ ಹೆಮ್ಮೆ ಎಂದು ನೆಟಿಜನ್ ಹಾಡಿ ಹೊಗಳಿದ್ದಾರೆ.