ಆನೇಕಲ್: ದೈಹಿಕ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರಿಯಾಶೀಲವಾಗಿದ್ರೆ ಅದು ಪ್ರಗತಿಯ ಸಂಕೇತ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಅಭಿಪ್ರಾಯಪಟ್ಟರು.
ದೈಹಿಕ ಚಟುವಟಿಕೆಗಳು ಪ್ರಗತಿಯ ಸಂಕೇತ: ಡಿಸಿಎಂ ಅಶ್ವತ್ಥ್ ನಾರಾಯಣ - ಕಬ್ಬಡ್ಡಿ ಪಂದ್ಯಾವಳಿಗೆ ಡಾ.ಅಶ್ವತ್ಥ್ ನಾರಾಯಣ ಚಾಲನೆ
ಎಲ್ಲಿ ದೈಹಿಕ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರಿಯಾಶೀಲವಾಗಿರುತ್ತದೆ. ಅದು ಪ್ರಗತಿಯ ಸಂಕೇತ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಅಭಿಪ್ರಾಯಪಟ್ಟರು.
ಡಿಸಿಎಂ ಅಶ್ವತ್ಥ್ ನಾರಾಯಣ
ಇಲ್ಲಿನ ಸರ್ಜಾಪುರದಲ್ಲಿ ನಡೆದ ಕಬಡ್ಡಿ ಪಂದ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಿ ಆಟಕ್ಕೆ ಇಷ್ಟು ವರ್ಷವಾದ್ರೂ ಕ್ರೀಡಾಂಗಣ ನಿರ್ಮಿಸದಿರುವುದು ಅಚ್ಚರಿ. ಜನ ನಾಯಕರೇ ಹಣ ನೀಡಿ ಕ್ರೀಡಾಂಗಣ ನಿರ್ಮಿಸಿ ಎಂದು ಸಂಸದರು ಹಾಗು ಮಾಜಿ ಜಿಪಂ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.
ಸರ್ಕಾರದಿಂದಲೂ ಕ್ರೀಡಾಂಗಣ ಮಾಡುತ್ತೇವೆ. ಜೊತೆಗೆ ಸ್ಥಳೀಯ ನಾಯಕರು ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.