ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವನಗುಂದಿ ಗ್ರಾಮದಲ್ಲಿರುವ ಕೆರೆಯಲ್ಲಿ ಪೆಟ್ರೋಲ್, ಡೀಸೆಲ್ ಮಿಶ್ರಿತ ನೀರು ಕೆರೆಗೆ ಸೇರುತ್ತಿದ್ದು, ದನಕರುಗಳು ನೀರು ಕುಡಿದು ಅನಾರೋಗ್ಯಕ್ಕೀಡಾಗುತ್ತಿವೆ. ಇನ್ನು ರೈತರು ತಾವು ಬೆಳೆದ ಬೆಳೆಗಳು ಕೈಗೆ ಸಿಗದೇ ಕಂಗಲಾಗಿ ಹೋಗಿದ್ದಾರೆ.
ಕೆರೆಗೆ ಪೆಟ್ರೋಲ್-ಡಿಸೇಲ್ ಮಿಶ್ರಿತ ತ್ಯಾಜ್ಯ ನೀರು: ಬೆಳೆ ಕೈಗೆ ಸಿಗದೆ ರೈತರು ಕಂಗಾಲು - Petrol Lake Spl pkg
ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವನಗುಂದಿ ಗ್ರಾಮದಲ್ಲಿರುವ ಕೆರೆಯಲ್ಲಿ ಪೆಟ್ರೋಲ್, ಡೀಸೆಲ್ ಮಿಶ್ರಿತ ನೀರು ಕೆರೆಗೆ ಸೇರುತ್ತಿದ್ದು, ಗ್ರಾಮದ ಜನರು ಕಂಗಲಾಗಿದ್ದಾರೆ.
ಊರಿನ ಪಕ್ಕದಲ್ಲೇ ಇರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಆವರಣದಲ್ಲಿರುವ ಹಿಂದುಸ್ಥಾನ್ ಪೆಟ್ರೋಲಿಯಮ್ ಕಂಪನಿಯಲ್ಲಿ ಬಳಸಿದ ಹಾಗೂ ಶುದ್ಧೀಕರಿಸದ ತ್ಯಾಜ್ಯ ನೀರನ್ನು ದೇವನಗುಂದಿ ಕೆರೆಗೆ ನೇರವಾಗಿ ಹರಿಬಿಡಲಾಗುತ್ತಿದೆಯಂತೆ. ಪೆಟ್ರೋಲ್, ಡಿಸೇಲ್ನ ತ್ಯಾಜ್ಯ ನೀರು ಕೆರೆಗೆ ಸೇರುತ್ತಿರುವುದರಿಂದ ಕೆರೆಯ ನೀರು ಕೂಡಾ ಪೆಟ್ರೋಲ್ ವಾಸನೆ ಬರುತ್ತಿದೆ. ಕೆರೆಗೆ ಪೆಟ್ರೋಲ್, ಡಿಸೇಲ್ ತ್ಯಾಜ್ಯ ನೀರು ಬರುತ್ತಿರುವುದರಿಂದ ಮೀನುಗಳು ಸಾಯುತ್ತಿವೆ. ದನಕರುಗಳು ನೀರನ್ನು ಕುಡಿದು ಅನಾರೋಗ್ಯಕ್ಕಿಡಾಗುತ್ತಿವೆ. ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಲು ಆಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಂಪನಿಯವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನು ಕೆರೆಯ ಸುತ್ತಮುತ್ತಲ ಕೊಳವೆ ಬಾವಿಗಳಲ್ಲೂ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಕೃಷಿಕರಿದ್ದು, ಸೊಪ್ಪು, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪೆಟ್ರೋಲ್ ಮಿಶ್ರಿತ ನೀರು ಬರುವುದರಿಂದ ಸರಿಯಾಗಿ ಬೆಳೆಗಳು ಆಗುತ್ತಿಲ್ಲ. ಅಲ್ಲದೇ ಹಣ್ಣು, ತರಕಾರಿ, ಸೋಪ್ಪುಗಳು ಕೂಡಾ ಪೆಟ್ರೋಲ್ ವಾಸನೆ ಬರುತ್ತವೆ. ಕಂಪನಿಯವರು ರಾತ್ರೋರಾತ್ರಿ ಇಲ್ಲವೇ ಮಳೆ ಬಂದಾಗ ಏಕಾಏಕಿ ನೀರನ್ನು ಬಿಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಸಂಭಂದಪಟ್ಟವರು ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
TAGGED:
Petrol Lake Spl pkg