ದೇವನಹಳ್ಳಿ (ಬೆಂಗಳುರು ಗ್ರಾಮಾಂತರ) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಅಮಿತ್ ಶಾ ಶುಕ್ರವಾರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರೋಡ್ ಶೋ ನಡೆಸಬೇಕಿತ್ತು. ಆದರೆ ನಿನ್ನೆ ಸಂಜೆ ನಿರಂತರ ಮಳೆಯಾದ ಕಾರಣ ರೋಡ್ ಶೋ ರದ್ದು ಮಾಡಲಾಯಿತು. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಅಕ್ಕಪಕ್ಕದಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
ಇದೇ ಬ್ಯಾರಿಕೇಡ್ಗಳಿಗೆ ಪ್ರಧಾನಿ ಮೋದಿ ಪ್ಲೆಕ್ಸ್ಗಳನ್ನು ಅಲ್ಲಲ್ಲಿ ಹಾಕಲಾಗಿತ್ತು. ಆದರೆ, ಮಳೆ ಬಿದ್ದ ಕಾರಣ ಮೋದಿ ಫೋಟೊ ನೀರಿನಿಂದ ನೆನೆದಿದ್ದು, ಇದನ್ನು ನೋಡಿದ ವ್ಯಕ್ತಿಯೊಬ್ಬ ಮೋದಿಯವರ ಫೋಟೊ ಪ್ಲೆಕ್ಸ್ನ್ನು ತನ್ನ ಟವೆಲ್ನಿಂದ ಒರೆಸುತ್ತಾ ಸಾಗಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಈ ವ್ಯಕ್ತಿ ಮೋದಿ ಅಂದ್ರೆ ಪ್ರೀತಿ, ಮೋದಿ ಅಂದ್ರೆ ನನ್ನ ವಿಶ್ವಾಸ ಎಂದು ಹೇಳಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.